alex Certify World No-Tobacco Day Special: ದುಶ್ಚಟಗಳಿಗೆ ದಾಸರಾಗಿದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

World No-Tobacco Day Special: ದುಶ್ಚಟಗಳಿಗೆ ದಾಸರಾಗಿದ್ರೆ ಈ ಸುದ್ದಿ ಓದಿ

ಇಂದಿನ ಯುವ ಜನಾಂಗ ಕುಡಿತ, ಸಿಗರೇಟು, ತಂಬಾಕು ಸೇವನೆ ಸೇರಿದಂತೆ ಹಲವು ದುಶ್ಚಟಗಳ ದಾಸರಾಗಿ ಪರಿತಪಿಸುತ್ತಿದೆ. ಮೊದಲು ಶೋಕಿಗೆಂದು ಆರಂಭವಾಗುವ ಈ ಚಟಗಳು ಬಳಿಕ ಅದರಿಂದ ಹೊರ ಬಾರದಂತೆ ಆಕ್ರಮಿಸಿಕೊಳ್ಳುತ್ತವೆ. ಇದರಿಂದಾಗಿ ಆರೋಗ್ಯ, ಮಾನಸಿಕ ಸ್ಥಿತಿಗತಿಗಳು ಹಾಳಾಗುತ್ತದಲ್ಲದೇ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಯಾವುದೇ ಒಂದು ದುಶ್ಚಟದಿಂದ ಹೊರ ಬರಲು ದೃಢ ನಿರ್ಧಾರ ಬಹು ಮುಖ್ಯವಾಗುತ್ತದೆ. ಈ ದುಶ್ಚಟಗಳಿಂದ ಆಗುತ್ತಿರುವ ಹಾನಿ ಕುರಿತು ಸಮಾಧಾನಚಿತ್ತವಾಗಿ ಕುಳಿತು ಯೋಚಿಸಿ ಬಳಿಕ ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಚಟವನ್ನು ತ್ಯಜಿಸಲು ತೆಗೆದುಕೊಂಡಿರುವ ನಿರ್ಧಾರದ ಕುರಿತು ಅತ್ಮೀಯರಾಗಿರುವವರೊಂದಿಗೆ ಹೇಳಿಕೊಂಡರೆ ಉತ್ತಮ. ಒಂದೊಮ್ಮೆ ಮತ್ತೆ ಆ ಚಟ ಮಾಡುವ ವೇಳೆ ಅವರು ಗಮನಿಸಿಯಾರೆಂಬ ಅಳುಕಿಗಾದರೂ ಅದನ್ನು ತ್ಯಜಿಸುತ್ತಾರೆ. ದುಶ್ಚಟ ತ್ಯಜಿಸಿದ ಬಳಿಕ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ. ಪುಸ್ತಕ ಓದುವುದು, ಸಂಗೀತ ಕೇಳುವುದು, ಧ್ಯಾನ, ಯೋಗ ಮೊದಲಾದ ಕಡೆ ಗಮನ ಹರಿಸುವುದು ಸೂಕ್ತ.

ಈ ಚಟದಿಂದ ಆಗುತ್ತಿರುವ ಆರ್ಥಿಕ ಹಾನಿಯ ಕುರಿತು ಲೆಕ್ಕ ಹಾಕಿ ಆ ಚಟವನ್ನು ತ್ಯಜಿಸಿದ ಬಳಿಕ ಉಳಿತಾಯವಾಗುತ್ತಿರುವ ಹಣವನ್ನು ಒಂದೆಡೆ ಕೂಡಿಡುತ್ತಾ ಬನ್ನಿ. ಆ ಮೊತ್ತವನ್ನು ತಿಂಗಳ ಬಳಿಕ ನೋಡಿದರೆ ಇದುವರೆಗೂ ಚಟಕ್ಕಾಗಿ ಸುರಿದ ಹಣದ ಕಾರಣಕ್ಕಾಗಿ ಪಶ್ಚಾತಾಪವಾಗುತ್ತದೆ. ಉಳಿತಾಯವಾಗಿರುವ ಈ ಹಣದಲ್ಲಿ ಕುಟುಂಬದವರನ್ನು ವಾರಾಂತ್ಯದ ದಿನಗಳಂದು ಹೊರಗಡೆ ಕರೆದುಕೊಂಡು ಹೋಗಿ ಊಟ ಮಾಡಿ. ಇದರಿಂದ ಅವರುಗಳಿಗೂ ಸಂತೋಷವಾಗುತ್ತದೆ. ನಿಮಗೂ ಆತ್ಮ ತೃಪ್ತಿ ದೊರೆಯುತ್ತದೆ. ಇನ್ನೇಕೆ ತಡ ಈಗಿನಿಂದಲೇ ದುಶ್ಚಟಗಳಿಂದ ಹೊರ ಬರಲು ಪ್ರಯತ್ನ ಆರಂಭಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...