ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಎಂದು ನಮ್ಮೆಲ್ಲರಿಗೂ ಗೊತ್ತೇ ಇದೆ. ಇದೇ ದಿನದಂದು ವಿಶ್ವ ಮೋಟರ್ ಬೈಕ್ ದಿನವೆಂದೂ ಆಚರಿಸಲಾಗುತ್ತದೆ. ಬೈಕ್ ಪ್ರಿಯರು, ಉತ್ಪಾದಕರು, ಮಾರಾಟಗಾರರು, ರಿಪೇರಿಗಾರರು ಸೇರಿದಂತೆ ಬೈಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಈ ದಿನವನ್ನು ಮುಡಿಪಾಗಿಡಲಾಗಿದೆ.
ಈ ದಿನದ ಪ್ರಯುಕ್ತ ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿರುವ ಟಾಪ್ 5 ಬೈಕ್‌ಗಳ ಪಟ್ಟಿಯನ್ನು ನಾವು ಇಲ್ಲಿ ಕೊಡುತ್ತಿದ್ದೇವೆ.
ನೆಕ್ಸ್ಟ್-ಜೆನ್ ಕೆಟಿಎಂ 200 ಡ್ಯೂಕ್
ಆಸ್ಟ್ರಿಯಾದ ಬೈಕಿಂಗ್ ದಿಗ್ಗಜ ಕೆಟಿಎಂ ತನ್ನ ನೆಕ್ಸ್ಟ್-ಜೆನ್ ಕೆಟಿಎಂ 200 ಡ್ಯೂಕ್ ಅನ್ನು ಈ ವರ್ಷಾಂತ್ಯಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಹೊಸ ಬೈಕಿನ ಫೀಚರ್‌ಗಳು, ಕಾಸ್ಮೆಟಿಕ್ ವಿನ್ಯಾಸ, ಸುರಕ್ಷತೆ ಸೇರಿದಂತೆ ಅನೇಕ ಫೀಚರ್‌ಗಳ ಮೇಲೆ ಕೆಟಿಎಂ ಕೆಲಸ ಮಾಡುತ್ತಿದೆ.
199.5 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್‌ನೊಂದಿಗೆ 24.6 ಬಿಎಚ್‌ಪಿ ಗರಿಷ್ಠ ಶಕ್ತಿ ಹಾಗೂ 19.3 ಎನ್‌ಎಂನಷ್ಟು ಟಾರ್ಕ್ ಅನ್ನು ನೆಕ್ಸ್ಟ್-ಜೆನ್ ಕೆಟಿಎಂ 200 ಡ್ಯೂಕ್ ಉತ್ಪಾದಿಸಬಲ್ಲದು. 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ಅನ್ನೂ ಈ ಬೈಕ್ ಹೊಂದಿರಲಿದೆ.
ಬಜಾಜ್ ಟ್ರಯಂಫ್ ಸ್ಕ್ರಾಂಬ್ಲರ್
ದೇಶದ ಮುಂಚೂಣಿ ಬೈಕ್ ಉತ್ಪಾದಕ ಬಜಾಜ್ ತನ್ನ ಹೊಸ ಟ್ರಯಂಫ್ ಸ್ಕ್ರಾಂಬ್ಲರ್ ಮೂಲಕ ಕಳೆದ ಕೆಲ ತಿಂಗಳಿನಿಂದ ಸುದ್ದಿಯಲ್ಲಿದೆ. ಲಂಡನ್‌ನಲ್ಲಿ ಜೂನ್ 27ರಂದು ಈ ಬೈಕ್ ಜಾಗತಿಕ ಪಾದಾರ್ಪಣೆ ಮಾಡಲಿದೆ. ಜುಲೈ 5ರಂದು ಪುಣೆಯಲ್ಲಿ ಇದೇ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು.
ಸೋರಿಕೆಗೊಂಡಿರುವ ಬೈಕಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಬೈಕ್‌ಪ್ರಿಯರ ಗಮನ ಸೆಳೆದಿವೆ.
ಹೀರೋ ಕರಿಷ್ಮಾ ಎಕ್ಸ್‌ಎಂಆರ್ 210
ದೇಶೀ ದ್ವಿಚಕ್ರ ವಾಹನ ಕಂಪನಿ ಹೀರೋ ಮೋಟೋಕಾರ್ಪ್ ಇದೇ ವಿಭಾಗದಲ್ಲಿ ತನ್ನದೊಂದು ಮಾಡೆಲ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಕರಿಷ್ಮಾ ಎಕ್ಸ್‌ಎಂಆರ್ 210 2015ರಲ್ಲಿ ಉತ್ಪಾದನೆ ನಿಲ್ಲಿಸಲಾದ ಕರೀಷ್ಮಾ ಜ಼ಡ್‌ಎಂಆರ್‌ನ ಸುಧಾರಿತ ಮಾಡೆಲ್ ಆಗಿದೆ.
ಸೆಪ್ಟೆಂಬರ್ – ನವೆಂಬರ್ ನಡುವೆ ಬಿಡುಗಡೆಯಾಗುವ ನಿರೀಕ್ಷೆ ಇರುವ ಕರಿಷ್ಮಾ ಎಕ್ಸ್‌ಎಂಆರ್ 210ನಲ್ಲಿ ಲಿಕ್ವಿಡ್ ಕೂಲ್ಡ್, 210 ಸಿಸಿ ಸಿಂಗಲ್-ಸಿಲಿಂಡರ್ ಇಂಜಿನ್ ಇರಲಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450
ಇದೇ ರೇಸ್‌ನಲ್ಲಿರುವ ರಾಯಲ್ ಎನ್‌ಫೀಲ್ಡ್ ಸಹ ತನ್ನ ಹಿಮಾಲಯನ್ 450ಯ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಆಫ್‌ರೋಡರ್‌ನ ಪ್ರಯೋಗ ಭರದಿಂದ ಸಾಗಿದೆ. ವರ್ಷಾಂತ್ಯದೊಳಗೆ ಈ ಬೈಕ್ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ಹೀರೋ – ಹಾರ್ಲೇ ಎಕ್ಸ್440
ಹೀರೋ ಮೋಟೋಕಾರ್ಪ್‌ನೊಂದಿಗೆ ಪಾಲುದಾರಿಕೆಯಲ್ಲಿ ಅಮೆರಿಕನ್ ಬೈಕಿಂಗ್ ದಿಗ್ಗಜ ಹಾರ್ಲೇ ಡೇವಿಡ್ಸನ್ ಎಕ್ಸ್440ಯನ್ನು ದೇಶದ ರಸ್ತೆಗಳಿಗೆ ಇಳಿಸಲು ಸನ್ನದ್ಧವಾಗಿದೆ. ಜುಲೈ 4ರಂದು ಈ ಬೈಕ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಬೈಕ್ ಅನ್ನು ಜಗತ್ತಿನಾದ್ಯಂತ ರಫ್ತು ಮಾಡಲಾಗುವುದು ಎನ್ನಲಾಗಿದೆ.