ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೋನಾ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಮುಗಿದಿದೆ ಎಂದು ಘೋಷಣೆ ಮಾಡಿದೆ.
ವಿಶ್ವದಾದ್ಯಂತ ಕೊರೋನಾ ಪ್ರಕರಣ ಕಡಿಮೆಯಾಗಿ ರೋಗಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ರೋಗದ ತೀವ್ರತೆ ಕೂಡ ಭಾರಿ ಕಡಿಮೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಮುಕ್ತಾಯವಾಗಿದೆ ಎಂದು ಘೋಷಿಸಿದೆ.
ಬಹಳ ಭರವಸೆಯಿಂದ ಕೊರೋನಾ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಮುಗಿದಿದೆ ಎಂದು ಘೋಷಿಸುತ್ತೇವೆ. ಆದಾಗ್ಯೂ, COVID-19 ಕೊನೆಗೊಂಡಿದೆ ಎಂದು ಇದರ ಅರ್ಥವಲ್ಲ. ಕಳೆದ ವಾರ ಕೊರೋನಾ ಪ್ರತಿ ಮೂರು ನಿಮಿಷಗಳಿಗೊಮ್ಮೆ ಜೀವ ಬಲಿಪಡೆದುಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.