
ಇಂದು ವಿಶ್ವ ಕಪ್ 28ನೇ ಪಂದ್ಯ ಕೊಲ್ಕತ್ತಾದ ಹಿಡನ್ ಗಾರ್ಡನ್ ನಲ್ಲಿ ನಡೆಯಲಿದ್ದು, ಬಾಂಗ್ಲಾದೇಶ ಹಾಗೂ ನೆದರ್ಲ್ಯಾಂಡ್ ಮುಖಮುಖಿಯಾಗುತ್ತಿವೆ. ಈ ಎರಡು ತಂಡಗಳು ಆಡಿರುವ 5 ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಸಾಧಿಸಿದ್ದು, ಸೆಮಿ ಫೈನಲ್ ಗೆ ಬರುವ ಸಾಧ್ಯತೆ ಕಡಿಮೆ ಇರುವ ಕಾರಣ ಯಾವುದೇ ಭಯವಿಲ್ಲದೆ ಎಂಜಾಯ್ ಮಾಡುವ ಮೂಲಕ ಇಂದು ಕಣಕ್ಕಿಳಿಯಲಿವೆ.
ಈ ಬಾರಿ ವಿಶ್ವಕಪ್ನ ಪಾಯಿಂಟ್ ಟೇಬಲ್ ಅಲ್ಲಿ ಬಾಂಗ್ಲಾದೇಶ ಎಂಟನೇ ಸ್ಥಾನದಲ್ಲಿದ್ದರೆ ನೆದರ್ಲ್ಯಾಂಡ್ ಹತ್ತನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಪಾಕಿಸ್ತಾನ ಸೇರಿದಂತೆ ಶ್ರೀಲಂಕಾ ತಂಡ ಸೋಲು ಕಂಡರೆ ಮಾತ್ರ ಈ ತಂಡಗಳಿಗೆ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆ ಇರುತ್ತದೆ.