
ವಿಶ್ವಕಪ್ ಪಂದ್ಯಗಳಲ್ಲಿ ಇತ್ತೀಚೆಗೆ ಬಲಿಷ್ಠ ತಂಡಗಳನ್ನೇ ಸೋಲಿಸುವ ಮೂಲಕ ಸಣ್ಣ ತಂಡಗಳು ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಆಫ್ಘಾನಿಸ್ತಾನ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಎದುರು ಜಯಭೇರಿಯಾದರೆ ನೆದರ್ಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಇಂದು ಆಸ್ಟ್ರೇಲಿಯಾ ಹಾಗೂ ನೆದರ್ಲ್ಯಾಂಡ್ ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ ತಂಡಕ್ಕೆ ನೆದರ್ಲ್ಯಾಂಡ್ ಇಂದು ಟಾಂಗ್ ನೀಡಲಿದೆಯಾ ಕಾದುನೋಡಬೇಕಾಗಿದೆ.
ನೆದರ್ಲ್ಯಾಂಡ್ ತಂಡದ ಆಟಗಾರರಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದು ಸೇರ್ಪಡೆಯಾಗಿರುವವರೇ ಹೆಚ್ಚಾಗಿದ್ದಾರೆ. ಹಾಗೂ ನಮ್ಮ ಭಾರತದ ಇಬ್ಬರು ಬಲಿಷ್ಠ ಬ್ಯಾಟ್ಸ್ಮನ್ಗಳಿದ್ದು, ಮತ್ತೊಂದು ಇತಿಹಾಸ ಬರೆಯಲು ನೆದರ್ಲ್ಯಾಂಡ್ ಸಜ್ಜಾಗಿದೆ.