ಅಲಹಾಬಾದ್ ಹೈಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಮಗುವಿನ ಜನನದ ನಂತರ ಹೆರಿಗೆ ರಜೆಯನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದೆ.
ಕಾನೂನಿನ ಪ್ರಕಾರ, ಮಗುವಿನ ಜನನದ ನಂತರವೂ ಮಾತೃತ್ವ ರಜೆ ಪಡೆಯುವ ಹಕ್ಕು ಮಹಿಳೆಗೆ ಇದೆ. ಮಾತೃತ್ವ ರಜೆ ಮತ್ತು ಮಕ್ಕಳ ಆರೈಕೆ ರಜೆ ಎರಡೂ ಬೇರೆ ಬೇರೆ ರಜೆಗಳು ಎಂದು ನ್ಯಾಯಾಲಯ ಹೇಳಿದೆ.
ಎರಡೂ ರಜೆಯನ್ನ ಒಟ್ಟಿಗೆ ತೆಗೆದುಕೊಳ್ಳಬಹುದು. ಮಗು ಈಗಾಗಲೇ ಹುಟ್ಟಿದೆ ಎಂಬ ಕಾರಣಕ್ಕಾಗಿ ಹೆರಿಗೆ ರಜೆಯನ್ನು ನಿರಾಕರಿಸುವುದು ತಪ್ಪು ಎಂದು ಜಸ್ಟೀಸ್ ಅಶುತೋಷ್ ಶ್ರೀವಾಸ್ತವ ಅವರ ಪೀಠವು ಹೇಳಿದೆ.
ಶಿಕ್ಷಕಿಯೊಬ್ಬರಿಗೆ ಹೆರಿಗೆ ರಜೆ ನೀಡುವ ಅರ್ಜಿ ವಜಾಗೊಳಿಸಿದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.