ರಷ್ಯಾದ ಡಜನ್‌ಗಟ್ಟಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯ ನಂತರ ಉಕ್ರೇನ್‌ನ ವಿದ್ಯುತ್ ಜಾಲಕ್ಕೆ ಹಾನಿಯುಂಟಾಗಿದೆ. ಯುದ್ಧದಿಂದ ಧ್ವಂಸಗೊಂಡ ದೇಶದಲ್ಲಿ ದೈನಂದಿನ ಜೀವನವನ್ನು ಉಕ್ರೇನಿಯನ್ ಪತ್ರಕರ್ತರು ಹೇಗೆ ನಿಭಾಯಿಸುತ್ತಿದ್ದಾರೆ, ಯುದ್ಧಭೂಮಿಯ ಚಿತ್ರಣವನ್ನು ಹೇಗೆ ನೀಡುತ್ತಿದ್ದಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೈವ್ ಮೂಲದ ಮಾಧ್ಯಮ ಔಟ್ಲೆಟ್ ಝಬೊರೋನಾ ಮೀಡಿಯಾದ ಪ್ರಧಾನ ಸಂಪಾದಕ ಸೆರ್ಗಟ್ಸ್ಕೋವಾ ಅವರು ಯುದ್ಧಭೂಮಿಯ ಸುದ್ದಿಗಳನ್ನು ನೀಡಲು, ಹೇಗೆ ಕಷ್ಟಪಡುತ್ತಿದ್ದಾರೆ ಎಂಬುದಕ್ಕೆ ತಮ್ಮ ಮನೆಯಲ್ಲಿ ದಿನನಿತ್ಯದ ಭೋಜನದ ತಯಾರಿಯ ಚಿತ್ರವನ್ನು ಟ್ವೀಟ್ ಮಾಡಲಾಗಿದೆ. ಹೆಲ್ಮೆಟ್ ಟಾರ್ಚ್‌ನ ಸಹಾಯ ಪಡೆದು ಅವರು ಅಡುಗೆ ಮಾಡುತ್ತಿದ್ದಾರೆ.
ಉಕ್ರೇನ್‌ನಲ್ಲಿನ ವಿದ್ಯುತ್ ಜಾಲದ ಮೇಲೆ ಅನೇಕ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಇದರ ಪರಿಣಾಮವಾಗಿ ಕಳೆದ ಎರಡು ವಾರಗಳಿಂದ ದೇಶಾದ್ಯಂತ ವ್ಯಾಪಕ ವಿದ್ಯುತ್ ಕಡಿತವಾಗುತ್ತಿದೆ. ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಇರಾನಿನ ಶಾಹೆದ್-136 ‘ಕಾಮಿಕೇಜ್’ ಡ್ರೋನ್‌ಗಳನ್ನು ಬಳಸುತ್ತಿದೆ. ಇದುವರೆಗೆ ಇಂತಹ 300 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಕೈವ್ ಹೇಳಿಕೊಂಡಿದೆ.
https://twitter.com/MutterSona/status/1584970305738772480?ref_src=twsrc%5Etfw%7Ctwcamp%5Etweetembed%7Ctwterm%5E1584970305738772480%7Ctwgr%5E4b016928bd67d3b2e0bbaa2d01f551193716cd06%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fworking-in-the-dark-journalists-cooking-photo-shows-the-reality-of-life-in-ukraines-warzone-6264553.html