ಧಾರವಾಡ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಉದಯೋನ್ಮುಖ ಯೋಜನೆಯಾದ ಅಂತರರಾಷ್ಟ್ರೀಯ ವಲಸೆ ಕೇಂದ್ರದ ಮುಖಾಂತರ ದುಬೈನಲ್ಲಿರುವ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯೊಂದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಕರ್ನಾಟಕ ಕೌಶಲ್ಯಾಭಿವೂದ್ಧಿ ನಿಗಮವು ಆಗಸ್ಟ್ 7 ರಂದು ಕಲಬುರ್ಗಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಿದೆ.
ನೆಲಹಾಸು(ಟೈಲ್ಸ್) ಕೆಲಸಕ್ಕೆ 100 ಹುದ್ದೆ ಹಾಗೂ ಮಾರ್ಬಲ್ ಕೆಲಸಕ್ಕೆ 100 ಹುದ್ದೆಗಳಿಗೆ ಸಂದರ್ಶನ ನಡೆಯಲಿದ್ದು, ಎರಡು ವರ್ಷಕ್ಕಿಂತ(24 ರಿಂದ 32 ವಯೋಮಾನದ) ಹೆಚ್ಚು ಅನುಭವವಿರುವ ಕಾರ್ಮಿಕರಿಗೆ ಹಾಗೂ ಹೊಸಬರಾಗಿರುವ (18 ರಿಂದ 23 ವಯೋಮಾನದ) ಕಾರ್ಮಿಕರಿಗೆ ಪ್ರತ್ಯೇಕ ವೇತನ ನಿಗದಿಗೊಳಿಸಿದ್ದು ವೇತನವನ್ನು ಯುಎಇ ಯ ದಿರ್ಹಾಮ್ (ಯುಎಇ ರೂಪಾಯಿ) ರೂಪದಲ್ಲಿ ನೀಡಲಾಗುತ್ತದೆ.
ಕಲಬುರಗಿಯ ಟೆಕ್ನಿಕಲ್ ಟ್ರೇನಿಂಗ್ ಇನ್‍ಸ್ಟಿಟ್ಯೂಟ್ ಪ್ರೈ.ಲಿ, ಕೆಐಎಡಿಬಿ ಕೈಗಾರಿಕಾ ಪ್ರದೇಶ 2 ನೇಯ ಹಂತ, ಬೆಳ್ಳುರು ಕ್ರಾಸ್ ಸಮೀಪ, ಮೈಲಾರಲಿಂಗದಾಲ್ ಮಿಲ್ ಕಂಪೌಂಡ್ ಕಲಬುಗಿ ಇಲ್ಲಿ ಆಗಸ್ಟ್ 7 ರ ರವಿವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂದರ್ಶನ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9449927305 ಗೆ ಕರೆ ಮಾಡಬಹುದು ಅಥವಾ www.kvtsdc.com ಜಾಲತಾಣಕ್ಕೆ ಭೇಟಿ ನೀಡಬಹುದು. ಮತ್ತು kvtsdcora@karnataka.gov.in ಗೆ ಇ-ಮೇಲ್ ಮಾಡಬಹುದು. ದೂರವಾಣಿ 8310100754, 08029753007 ಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದೆಂದು ಧಾರವಾಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.