
ಬೆಂಗಳೂರು: ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಎರಡನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಕಾರ್ಮಿಕರ ವೇತನ ಸಹಿತ ರಜೆಯನ್ನು 30 ರಿಂದ 45 ದಿನಕ್ಕೆ ಹೆಚ್ಚಿಸುವ ಈ ವಿಧೇಯಕಕ್ಕೆ ಸದನದಲ್ಲಿ ಅನುಮೋದನೆ ದೊರೆತಿದೆ.
ಆ ವರ್ಷದಲ್ಲಿ ಕಾರ್ಮಿಕ ರಜೆಯನ್ನು ಬಳಸಿಕೊಳ್ಳದಿದ್ದರೆ ಮುಂದಿನ ವರ್ಷಕ್ಕೆ ರಜೆ ಮುಂದುವರಿಕೆಯಾಗಲಿದೆ ಎಂದು ಹೇಳಲಾಗಿದೆ. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ, ಗುಜರಾತ್ ನಲ್ಲಿ 67, ತಮಿಳುನಾಡಿನಲ್ಲಿ 45, ಮಧ್ಯಪ್ರದೇಶದಲ್ಲಿ 90 ದಿನ ಹಾಗೂ ಆಂಧ್ರಪ್ರದೇಶದಲ್ಲಿ 65 ದಿನದವರೆಗೆ ರಜೆ ಪಡೆಯುವ ಕಾನೂನು ಜಾರಿಯಲ್ಲಿದೆ ಎಂದು ಹೇಳಿದ್ದಾರೆ.