alex Certify ಕಾರ್ಮಿಕರೇ ಗಮನಿಸಿ : `PMSBY’ ಯೋಜನೆಯಡಿ 2 ಲಕ್ಷ ರೂ. ಅಪಘಾತ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕರೇ ಗಮನಿಸಿ : `PMSBY’ ಯೋಜನೆಯಡಿ 2 ಲಕ್ಷ ರೂ. ಅಪಘಾತ ಪರಿಹಾರ

ಬೆಂಗಳೂರು : ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಕ್ರೋಢೀಕರಿಸುವ ಉದ್ದೇಶದಿಂದ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಮೂಲಕ ದಿ: 26-08-2021 ರಿಂದ ನೊಂದಾಯಿಸಲಾಗುತ್ತಿದೆ.

ದಿ: 31-03-2022 ರವರೆಗೆ ನೋಂದಣಿಯಾದ ಮತ್ತು ಈ ದಿನಾಂಕದೊಳಗೆ ಅಪಘಾತಗೊಂಡ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ(ಪಿಎಂಎಸ್‍ಬಿವೈ) ಯಡಿ ರೂ.2 ಲಕ್ಷಗಳ ಅಪಘಾತ ಪರಿಹಾರವನ್ನು ಒದಗಿಸಲಾಗುವುದು.

ಅಪಘಾತದಿಂದ ಮರಣ ಹೊಂದಿದ್ದಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್ ಕಾರ್ಡ್)/ಸಂಖ್ಯೆ, ಮರಣ ಪ್ರಮಾಣ ಪತ್ರ, ಮರಣಕ್ಕೆ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಎಫ್‍ಐಆರ್/ಪಂಚನಾಮ, ಕ್ಲೇಮುದಾರ ಮೈನರ್ ಆಗಿದ್ದರೆ ಜಿಲ್ಲಾ ನ್ಯಾಯಾಲದಿಂದ ನಿಡಲಾಗುವ ಗಾರ್ಡಿಯನ್‍ಶಿಪ್ ಪ್ರಮಾಣ ಪತ್ರ ಸಲ್ಲಿಸಬೇಕು.

ಅಪಘಾತದಿಂದ ಅಂಗವೈಕಲ್ಯ ಹೊಂದಿದ್ದಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್ ಕಾರ್ಡ್)/ಸಂಖ್ಯೆ, ಅಪಘಾತದಿಂದ ಉಂಟಾದ ಅಂಗವೈಕಲ್ಯವನ್ನು ಸೂಚಿಸುವ ಡಿಸ್ಚಾರ್ಜ್ ಸಾರಾಂಶವನ್ನು ಒಳಗೊಂಡಿರುವ ಆಸ್ಪತ್ರೆಯ ದಾಖಲೆ, ಅಂಗವೈಕಲ್ಯ ಪ್ರಮಾಣ ಪತ್ರ ಅಥವಾ ಯುಡಿಐದಿ ಕಾರ್ಡ್ ನ್ನು ಸಲ್ಲಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...