ಲಂಡನ್: ಕೆಲಸದ ಒತ್ತಡವು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಕೆಲಸದ ಒತ್ತಡ, ನಿದ್ರೆಯ ಅಸ್ವಸ್ಥತೆಗಳು ಹಾಗೂ ಆಯಾಸವು ಪುರುಷರಿಗಿಂತ ಮಹಿಳೆಯರಲ್ಲಿ ತೀವ್ರವಾಗಿ ಹೆಚ್ಚುತ್ತಿದೆ.
ಇದು ಹೃದಯಾಘಾತ, ಪಾರ್ಶ್ವವಾಯುನಂತಹ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಯುರೋಪಿಯನ್ ಸ್ಟ್ರೋಕ್ ಸಂಸ್ಥೆ ತನ್ನ ಹೊಸ ಅಧ್ಯಯನದಲ್ಲಿ ಈ ಅಂಶವನ್ನು ತಿಳಿಸಿದೆ.
ಈ ಬಾರಿ ಕನ್ನಡಿಗರಿಗೆ ಒಲಿಯಲಿದೆಯಾ ಬೆಂಗಳೂರು ಕಮಿಷನರ್ ಪಟ್ಟ……?
ಹೊಸ ಅಧ್ಯಯನದ ಪ್ರಕಾರ, ಮಧುಮೇಹ, ಅಧಿಕ ರಕ್ತದೊತ್ತಡ, ಹೆಚ್ಚಿದ ಕೊಲೆಸ್ಟ್ರಾಲ್, ಧೂಮಪಾನ, ಬೊಜ್ಜು, ಹಾಗೂ ದೈಹಿಕ ನಿಷ್ಕ್ರಿಯತೆಯು ಹೃದಯ ರಕ್ತನಾಳದ ಕಾಯಿಲೆಗೆ ಮಾರ್ಪಡಿಸಬಹುದಾದ ಅಪಾಯಕಾರಿ ಅಂಶಗಳೆಂದು ಗುರುತಿಸಲ್ಪಟ್ಟಿದೆ. ಆದರೆ, ಇತ್ತೀಚಿನ ಜೀವನ ಶೈಲಿಯಲ್ಲಾದ ಬದಲಾವಣೆಯಿಂದಾದ ಕೆಲಸದ ಒತ್ತಡ ಹಾಗೂ ನಿದ್ರಾಹೀನತೆಯಂತಹ ಸಮಸ್ಯೆಗಳು ಹೃದಯ ರಕ್ತನಾಳದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಗಮನಿಸಲಾಗಿದೆ.