ಕೊರೊನಾದಿಂದಾಗಿ ವಿಶ್ವದ ಬಹುತೇಕ ಎಲ್ಲಾ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಂ ಆದೇಶ ಇದ್ದಿದ್ದರಿಂದ ಸಿಬ್ಬಂದಿ ಮನೆಯಲ್ಲೇ ಕೂತು ಕಚೇರಿ ಕೆಲಸವನ್ನ ಮಾಡುತ್ತಿದ್ದರು, ಆದರೆ ಇದೀಗ ಕೆಲ ದೇಶಗಳಲ್ಲಿ ಸಹಜ ಸ್ಥಿತಿ ಮರುಕಳಿಸ್ತಾ ಇರೋದ್ರಿಂದ ಮೊದಲಿನಂತೆಯೇ ಕೆಲಸ ಮಾಡಲು ಕಂಪನಿಗಳು ನಿರ್ಧರಿಸಿವೆ. ಆದರೆ ಸಿಬ್ಬಂದಿಯನ್ನ ವಾಪಸ್ ಕಚೇರಿಗೆ ಕರೆತರುವ ವಿಚಾರದಲ್ಲಿ ಬಹುತೇಕ ಕಂಪನಿಗಳಲ್ಲಿ ಸಿಬ್ಬಂದಿ ಹಾಗೂ ಉದ್ಯೋಗದಾತರ ನಡುವೆ ವಾಗ್ವಾದ ಶುರುವಾಗೋಕೆ ಕಾರಣವಾಗಿದೆ.
ಜಾಗತಿಕ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಫಾರೆಸ್ಟರ್ ನೀಡಿರುವ ಮಾಹಿತಿಯ ಪ್ರಕಾರ ಶೇಕಡಾ 70ರಷ್ಟು ಅಮೆರಿಕ ಹಾಗೂ ಯುರೋಪಿಯನ್ ಕಂಪನಿಗಳು ಕೊರೊನಾ ಬಳಿಕ ಕಚೇರಿಗಳು ಹೈಬ್ರಿಡ್ ಮಾದರಿಯ ಕೆಲಸಕ್ಕೆ ಮುಂದಾಗಿವೆ. ಅಮೆರಿಕ ಹಾಗೂ ಯುರೋಪ್ನಲ್ಲಿ ಈಗಾಗಲೇ 30 ಪ್ರತಿಶತದಷ್ಟು ಕಂಪನಿಗಳು ಕಚೇರಿಯಿಂದಲೇ ಕೆಲಸ ಆರಂಭಿಸಿವೆ.
ಅನೇಕ ಕಂಪನಿಗಳು ಈ ವರ್ಕ್ ಫ್ರಮ್ ಹೋಮ್ಗಿಂತ ಕಚೇರಿಯಲ್ಲಿ ಕೆಲಸ ಮಾಡೋದ್ರಿಂದಲೇ ಸಿಬ್ಬಂದಿಯಿಂದ ಗುಣಮಟ್ಟದ ಕೆಲಸ ಸಿಗುತ್ತೆ ಎಂದು ನಂಬಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ನೌಕರರು ಕಚೇರಿಗೆ ವಾಪಸ್ಸಾಗುವ ನಿರ್ಧಾರದ ಬಗ್ಗೆ ಸಮ್ಮತಿಯನ್ನ ಹೊಂದಿಲ್ಲ. ಕಳೆದೊಂದು ವರ್ಷದಿಂದ ಎಲ್ಲಿಯೂ ಪ್ರಯಾಣಿಸದೇ ಮನೆಯಲ್ಲೇ ಇದ್ದ ಅನೇಕರಿಗೆ ಕಂಪನಿಯ ಈ ನಿರ್ಧಾರ ಖುಷಿ ಕೊಡುತ್ತಿಲ್ಲ. ಅಲ್ಲದೇ ಕೊರೊನಾ ವೈರಸ್ ಹಾಗೂ ಇನ್ನೂ ಲಸಿಕೆ ಪಡೆಯದ ಸಿಬ್ಬಂದಿಯಿಂದ ತಮಗೆ ಅಪಾಯವಾಗುತ್ತೆ ಎಂದು ನಂಬಿದ್ದಾರೆ. ಹೀಗಾಗಿ ಕಂಪನಿ ಕೆಲಸಕ್ಕೆ ಹಾಜರಾಗೋದಕ್ಕಿಂತ ಕೆಲಸಕ್ಕೆ ರಾಜೀನಾಮೆ ನೀಡೋದೇ ಒಳ್ಳೆಯದು ಅನ್ನೋದು ಅನೇಕರ ಅಭಿಪ್ರಾಯವಾಗಿದೆ.