
ಬೆಂಗಳೂರು: ಮದುವೆ ಕೆಲಸಕ್ಕೆ ಬಂದವರಿಗೆ ಕಡಿಮೆ ಹಣ ನೀಡಿ ವಂಚಿಸಲಾಗಿದ್ದು, ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಗುಣ ಎಂಬ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಿರುಪತ್ತೂರಿನಿಂದ ಮದುವೆ ಕೆಲಸಕ್ಕೆ 60 ಜನ ಬಂದಿದ್ದು, ಒಬ್ಬರಿಗೆ ದಿನಕ್ಕೆ 1,250 ರೂ. ಕೊಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದರು. ಶನಿವಾರ, ಭಾನುವಾರ ಅರಮನೆ ಮೈದಾನದಲ್ಲಿ ವಿವಾಹ ನಡೆದಿದ್ದು, ಕಾರ್ಯಕ್ರಮದಲ್ಲಿ 60 ಜನ ಕೆಲಸ ಮಾಡಿದ್ದಾರೆ.
ಈಗ ಕೆಲಸ ಮುಗಿದ ಮೇಲೆ 1 ಸಾವಿರ ರೂಪಾಯಿ ಕೊಡುವುದಾಗಿ ಹೇಳುತ್ತಿದ್ದಾರೆ. ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ನಮಗೆ ಮಾತುಕೊಟ್ಟಂತೆ ಕೆಲಸದ ಮಾಡಿದ ದುಡ್ಡು ಕೊಡಿ ಎಂದು ಪಟ್ಟು ಹಿಡಿದು ಠಾಣೆಗೆ ದೂರು ನೀಡಲಾಗಿದೆ.