ಗೂಗಲ್ನ ವಾರ್ಷಿಕ ಹುಡುಕಾಟ ಪಟ್ಟಿ ಇದೀಗ ಹೊರಬಂದಿದೆ. ವರ್ಷವಿಡೀ ಸಾಮೂಹಿಕವಾಗಿ ಜನರ ಗಮನ ಸೆಳೆದ ಪದಗಳ ಸಂಕಲನ ಇದಾಗಿದೆ. ಈ ವರ್ಷ ‘ವರ್ಡಲ್'(wordle) ಎಂಬ ಪದವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ವರ್ಡಲ್ ಒಂದು ಜನಪ್ರಿಯ ಆಟವಾಗಿದೆ. ಆಟಗಾರರಿಗೆ ಪ್ರತಿದಿನ ಒಂದು ಪದವನ್ನು ಊಹಿಸಲು ಸವಾಲು ಹಾಕಲಾಗುತ್ತದೆ. ವೆಬ್-ಆಧರಿತ ಪದದಾಟವನ್ನು ವೆಲ್ಷ್ ಸಾಫ್ಟ್ವೇರ್ ಎಂಜಿನಿಯರ್ ಜೋಶ್ ವಾರ್ಡಲ್ ರಚಿಸಿ ಅಭಿವೃದ್ಧಿಪಡಿಸಿದ್ದಾರೆ.
ಇದು ನ್ಯೂಯಾರ್ಕ್ ಟೈಮ್ಸ್ ಒಡೆತನದಲ್ಲಿದೆ. ಮೆದುಳಿಗೆ ತರಬೇತಿ ನೀಡಿ ಮತ್ತು ನಿರ್ದಿಷ್ಟ ಸಮಯದೊಳಗೆ ಸಾಧ್ಯವಾದಷ್ಟು ಪದಗಳನ್ನು ಕಂಡುಹಿಡಿಯುವ ಮೂಲಕ ಶಬ್ದಕೋಶವನ್ನು ಪರೀಕ್ಷಿಸಿಕೊಳ್ಳುವ ಆಟವಿದು. ಪದವನ್ನು ನಿರ್ಮಿಸಲು ಅಕ್ಷರಗಳನ್ನು ಸ್ವೈಪ್ ಮಾಡಿ, ದಾರಿಯುದ್ದಕ್ಕೂ ಅಂಕಗಳನ್ನು ಗಳಿಸಬಹುದು.
ಇಲ್ಲಿಯವರೆಗೆ ಅತಿ ಹೆಚ್ಚು ಸರ್ಚ್ನಲ್ಲಿ ಬಳಕೆಯಾಗಿದ್ದ “ಉಕ್ರೇನ್” ಅಥವಾ “ಕ್ವೀನ್ ಎಲಿಜಬೆತ್”ಗಿಂತಲೂ ಈ ಶಬ್ದ ಹೆಚ್ಚು ಜನಪ್ರಿಯತೆ ಗಳಿಸಿದೆ. ವರ್ಷದ ಎರಡನೇ ಅತಿ ಹೆಚ್ಚು ಹುಡುಕಾಟದ ಪದವೆಂದರೆ “ಭಾರತ vs ಇಂಗ್ಲೆಂಡ್”.