ನವದೆಹಲಿ: B.1.617 ರೂಪಾಂತರವನ್ನು ‘ಭಾರತೀಯ ರೂಪಾಂತರ’ ಎಂದು ಹೆಸರಿಸುವುದನ್ನು ಸರ್ಕಾರ ಆಕ್ಷೇಪಿಸಿದೆ. ‘ಭಾರತೀಯ ರೂಪಾಂತರ’ ಎಂಬ ಪದವನ್ನು ವಿಶ್ವ ಆರೋಗ್ಯ ಸಂಸ್ಥೆ ಎಂದಿಗೂ ಬಳಸಿಲ್ಲ.
ವೈರಸ್ ಗಳು ಅಥವಾ ರೂಪಾಂತರ ವೈರಸ್ ಕಾಣಿಸಿಕೊಂಡ ದೇಶಗಳ ಹೆಸರಿನಿಂದ ಅದನ್ನು ಗುರುತಿಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ. ಹಲವು ಮಾಧ್ಯಮ ವರದಿಗಳಲ್ಲಿ B.1.617 ರೂಪಾಂತರವನ್ನು ಜಾಗತಿಕ ಕಾಳಜಿಯ ರೂಪಾಂತರವೆಂದು ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿದೆ. ಈ ವರದಿಗಳಲ್ಲಿ B.1.617 ಕೊರೋನಾ ವೈರಸ್ ಭಾರತೀಯ ರೂಪಾಂತರ ಎಂದು ಕರೆದಿಲ್ಲ. ಇಂತಹ ವರದಿಗಳು ಯಾವುದೇ ಆಧಾರವಿಲ್ಲದ ಮತ್ತು ಆಧಾರರಹಿತ ವರದಿಗಳಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಹೇಳಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ 32 ಪುಟಗಳ ದಾಖಲೆಯಲ್ಲಿ ಕೊರೊನಾ ವೈರಸ್ B.1.617 ಭಾರತೀಯ ರೂಪಾಂತರ ವೈರಸ್ ಎಂಬ ಪದವನ್ನು ಬಳಸಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟೀಕರಣದೊಂದಿಗೆ ‘ಭಾರತೀಯ’ ಪದ ಬಳಕೆಯಾಗಿಲ್ಲ ಎಂದು ಹೇಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಸೋಂಕು ಕಾಣಿಸಿಕೊಂಡ ದೇಶಗಳ ಹೆಸರಿನೊಂದಿಗೆ ರೂಪಾಂತರವನ್ನು ಗುರುತಿಸುವುದಿಲ್ಲ. ಅವುಗಳ ವೈಜ್ಞಾನಿಕ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ಎಲ್ಲರೂ ಕೂಡ ಅದೇ ರೀತಿ ಬಳಸಲು ತಿಳಿಸಲಾಗಿದೆ.
ಭಾರತದಲ್ಲಿ ಕಳೆದ ಅಕ್ಟೋಬರ್ ನಲ್ಲಿ ಮೊದಲು ಕಂಡುಬಂದ B.1.617 ರೂಪಾಂತರ ಸಾಮರ್ಥ್ಯ ಹೆಚ್ಚಾಗಿದೆ. ಅದು ವೇಗವಾಗಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದು, 44 ದೇಶಗಳಲ್ಲಿ ಕಂಡು ಬಂದಿದೆ ಎಂದು ಕೂಡ ಮಾಹಿತಿ ನೀಡಿದೆ. ಜಾಗತಿಕ ಮಟ್ಟದಲ್ಲಿ ಇದನ್ನು ‘ಕಾಳಜಿಯ ರೂಪಾಂತರ’ ಎಂದು ವರ್ಗೀಕರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು’variant of interest’(ಆಸಕ್ತಿಯ ರೂಪಾಂತರ) ಎಂದು ತಿಳಿಸಿದೆ.
ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ COVID-19 ನ ಇತರ ಮೂರು ರೂಪಾಂತರಗಳನ್ನು ಈಗಾಗಲೇ ‘of concern’ ಎಂದು ವರ್ಗೀಕರಿಸಲಾಗಿದೆ.
ವೈರಸ್‌ನ ಜೀನೋಮ್‌ನಲ್ಲಿ ಎರಡು ಬದಲಾವಣೆಗಳು ಇರುವುದರಿಂದ B.1.617 ಸ್ಟ್ರೈನ್ ಅನ್ನು ಡಬಲ್ ರೂಪಾಂತರಿತ ಎಂದು ಕರೆಯಲಾಗುತ್ತದೆ, ಇದನ್ನು E484Q ಮತ್ತು L452R ಎಂದು ಕರೆಯಲಾಗುತ್ತದೆ.