ಮಾಜಿ ಕ್ರಿಕೆಟಿಗರ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಪಂದ್ಯಗಳು ಒಂದಕ್ಕಿಂತ ಒಂದು ಭರ್ಜರಿ ಮನರಂಜನೆ ನೀಡುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ತಮ್ಮ ಹಳೆಯ ಹೀರೋಗಳ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ. ಸ್ಟಾರ್ ಆಟಗಾರರಾಗಿ ಮಿಂಚಿದ್ದ. ಯುವರಾಜ್ ಸಿಂಗ್ ಸೇರಿದಂತೆ ರಾಬಿನ್ ಉತ್ತಪ್ಪ, ಸುರೇಶ್ ರೈನಾ ಬ್ಯಾಟಿಂಗ್ ಅನ್ನು ಮತ್ತೊಮ್ಮೆ ವೀಕ್ಷಿಸುವ ಅವಕಾಶ ಸಿಕ್ಕಿದೆ.
ಇಂದು ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ನ 11ನೇ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವೇ ಸಿಗಲಿದೆ. ಭಾರತದ ಬದ್ಧ ವೈರಿಯಾದ ಪಾಕಿಸ್ತಾನ ಈಗಾಗಲೇ ಸೆಮಿ ಫೈನಲ್ಸ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಭಾರತ ತಂಡಕ್ಕೆ ಇಂದು ಗೆಲುವು ಅನಿವಾರ್ಯವಾಗಿದೆ. ಇನ್ನೂ ಆಸ್ಟ್ರೇಲಿಯಾ ತಂಡ ಕೂಡ ಎರಡು ಪಂದ್ಯಗಳಲ್ಲಿ ಜಯ ಕಂಡಿದ್ದು, ಸಾಕಷ್ಟು ರನ್ ರೇಟ್ ಹೊಂದಿರುವ ಕಾರಣ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.