ಗುಜರಿ ಅಂಗಡಿಯಿಂದ ಮರದ ಕುರ್ಚಿಯನ್ನು ಕೇವಲ 5 ಪೌಂಡ್ ( 500 ರೂ.) ಗೆ ಖರೀದಿಸಿದ ಮಹಿಳೆಯೊಬ್ಬರು ಅದನ್ನು ಹರಾಜಿನಲ್ಲಿ £16,250 (ರೂ. 16.4 ಲಕ್ಷ) ಗೆ ಮಾರಾಟ ಮಾಡಿದ್ದಾರೆ.
ಬ್ರಿಟನ್‌ನ ಈಸ್ಟ್ ಸಸೆಕ್ಸ್‌ನ ಬ್ರೈಟನ್‌ನಲ್ಲಿರುವ ಅಂಗಡಿಯಿಂದ ಕುರ್ಚಿಯನ್ನು ಈ ಮಹಿಳೆ ಖರೀದಿಸಿದ್ದರು. ಆದರೆ ಕುರ್ಚಿಯಲ್ಲಿ ಬೆಲೆಬಾಳುವ ವಿನ್ಯಾಸವಿದೆ ಎಂದು ಆಕೆಗೆ ಆಗ ತಿಳಿದಿರಲಿಲ್ಲ. ಮೌಲ್ಯಮಾಪಕನೊಂದಿಗೆ ಸಂಪರ್ಕದಲ್ಲಿದ್ದ ವೇಳೆ, ಕುರ್ಚಿಯು ಆಸ್ಟ್ರಿಯಾದ ವಿಯೆನ್ನಾದಲ್ಲಿ 20ನೇ ಶತಮಾನದ ಆರಂಭದ ಅವಂತ್-ಗಾರ್ಡ್ ಕಲಾ ಶಾಲೆಯಿಂದ ಬಂದಿದೆ ಎಂದು ಮಹಿಳೆ ಕಂಡುಕೊಂಡಿದ್ದಾರೆ.
BIG NEWS: ಜನವರಿ ವೇಳೆ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ
1902ರಲ್ಲಿ ಆಸ್ಟ್ರಿಯಾದ ಪ್ರತಿಷ್ಠಿತ ವರ್ಣಚಿತ್ರಕಾರ ಕೊಲೊಮನ್ ಮೋಸರ್ ಅವರು ಈ ಕುರ್ಚಿಯನ್ನು ವಿನ್ಯಾಸಗೊಳಿಸಿದರು. ಮೋಸರ್ ಸಾಂಪ್ರದಾಯಿಕ ಕಲಾತ್ಮಕ ಶೈಲಿಗಳನ್ನು ತಿರಸ್ಕರಿಸಿದ ವಿಯೆನ್ನಾ ಸೆಸೆಶನ್ ಚಳುವಳಿಯ ಕಲಾವಿದರಾಗಿದ್ದರು.
ಕುರ್ಚಿಯು 18ನೇ ಶತಮಾನದ ಸಾಂಪ್ರದಾಯಿಕ ಲ್ಯಾಡರ್-ಬ್ಯಾಕ್ ಕುರ್ಚಿಯ ಆಧುನಿಕ ಮರುವ್ಯಾಖ್ಯಾನವಾಗಿದೆ. ಇದರಲ್ಲಿನ ಅಲಂಕಾರಿಕ ಅಂಶವಾಗಿ ಆಸನ ಮತ್ತು ಕುರ್ಚಿಯ ಹಿಂಭಾಗದಲ್ಲಿ ವೆಬ್ಬಿಂಗ್‌ನಲ್ಲಿ ಚೆಕ್ ಬೋರ್ಡ್ ತರಹದ ಗ್ರಿಡ್ ಆಗಿದೆ.
ಎಸೆಕ್ಸ್‌ನ ಸ್ಟಾನ್‌ಸ್ಟೆಡ್ ಮೌಂಟ್‌ಫಿಟ್‌ಚೆಟ್‌ನ ಸ್ವೋರ್ಡರ್ಸ್ ಹರಾಜುದಾರರಲ್ಲಿ ಕುರ್ಚಿ ಮಾರಾಟವಾಗಿತ್ತು. ಆಸ್ಟ್ರಿಯಾದ ವ್ಯಾಪಾರಿಯೊಬ್ಬರು 16,250 ಪೌಂಡ್‌ಗಳಿಗೆ (ರೂ. 16.4 ಲಕ್ಷ) ಫೋನ್ ಮೂಲಕ ಬಿಡ್ ಕೂಗಿ ಕುರ್ಚಿಯನ್ನು ಖರೀದಿಸಿದರು.