ವಾಷಿಂಗ್ಟನ್: ರಾಸಾಯನಿಕ ಅಸ್ತ್ರಗಳ ಬಳಕೆಗೆ ರಷ್ಯಾ ತೀವ್ರ ಬೆಲೆ ತೆರಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ,
ನ್ಯಾಟೋ ಮತ್ತು ಕ್ರೆಮ್ಲಿನ್ ನಡುವಿನ ನೇರ ಮುಖಾಮುಖಿಯಾಗಲಿದ್ದು, 3 ನೇ ಜಾಗತಿಕ ಯುದ್ಧವನ್ನು ಪ್ರಚೋದಿಸುತ್ತದೆ. ಉಕ್ರೇನ್ ನಲ್ಲಿ ಮಾಸ್ಕೋ ವಿರುದ್ಧ ವಾಷಿಂಗ್ಟನ್ ಹೋರಾಡುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಮಾಸ್ಕೋ ಉಕ್ರೇನ್ ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ಸ್ವತಂತ್ರ ಘಟಕಗಳಾಗಿ ಗುರುತಿಸಿದ ಮೂರು ದಿನಗಳ ನಂತರ ಫೆಬ್ರವರಿ 24 ರಂದು, ರಷ್ಯಾದ ಪಡೆಗಳು ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು,
ನಾವು ಯುರೋಪ್‌ನಲ್ಲಿ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಒಟ್ಟಾಗಿ ನಿಲ್ಲುವುದನ್ನು ಮುಂದುವರಿಸಲಿದ್ದೇವೆ. ತಪ್ಪಾಗದ ಸಂದೇಶವನ್ನು ಕಳುಹಿಸುತ್ತೇವೆ. ನಾವು ಯುನೈಟೆಡ್ ಸ್ಟೇಟ್ಸ್ ನ ಸಂಪೂರ್ಣ ಶಕ್ತಿಯೊಂದಿಗೆ NATO ಪ್ರದೇಶದ ಪ್ರತಿಯೊಂದು ಇಂಚಿನನ್ನೂ ರಕ್ಷಿಸುತ್ತೇವೆ. NATO ಉತ್ತೇಜಿಸುತ್ತೇವೆ. ನಾವು ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ. NATO ಮತ್ತು ರಷ್ಯಾ ನಡುವಿನ ನೇರ ಮುಖಾಮುಖಿ ವಿಶ್ವ ಸಮರ 3ಕ್ಕೆ ಪ್ರಚೋದನೆಗೆ ಕಾರಣವಾಗಬಹುದು. ಇದನ್ನು ತಡೆಯಲು ನಾವು ಶ್ರಮಿಸಬೇಕು ಎಂದು ಬಿಡೆನ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್(NATO) 30 ಉತ್ತರ ಅಮೇರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳ ಗುಂಪು. NATO ಪ್ರಕಾರ, ಅದರ ಉದ್ದೇಶ ರಾಜಕೀಯ ಮತ್ತು ಮಿಲಿಟರಿ ವಿಧಾನಗಳ ಮೂಲಕ ಅದರ ಸದಸ್ಯರ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತರಿಪಡಿಸುವುದಾಗಿದೆ.
ಉಕ್ರೇನ್ ನಲ್ಲಿ ರಷ್ಯಾ ಎಂದಿಗೂ ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಬಿಡೆನ್ ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ನಲ್ಲಿ ಪ್ರಾಬಲ್ಯ ಸಾಧಿಸಲು ಆಶಿಸಿದ್ದರಾದರೂ ಅವರು ವಿಫಲರಾದರು. ಪುಟಿನ್ ಅವರು ಅಟ್ಲಾಂಟಿಕ್ ಒಕ್ಕೂಟವನ್ನು ಮುರಿಯುವ ಮತ್ತು ದುರ್ಬಲಗೊಳಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ ಎಂದು ಬಿಡೆನ್ ಹೇಳಿದರು.
ಉಕ್ರೇನ್ ವಿಷಯದಲ್ಲಿ ಅಮೆರಿಕದ ಜನರು ಮತ್ತು ಜಗತ್ತು ಒಗ್ಗಟ್ಟಾಗಿದೆ. ನಾವು ಉಕ್ರೇನ್ ಜನರೊಂದಿಗೆ ನಿಲ್ಲುತ್ತೇವೆ. ನಿರಂಕುಶಾಧಿಕಾರಿಗಳು ಪ್ರಪಂಚವನ್ನು ನಿರ್ದೇಶಿಸಲು ಬಿಡುವುದಿಲ್ಲ. ಈ ಕ್ಷಣವನ್ನು ಎದುರಿಸಲು ಪ್ರಜಾಪ್ರಭುತ್ವಗಳು ಒಂದಾಗುತ್ತಿವೆ. ಜಗತ್ತನ್ನು ಶಾಂತಿಯ ಕಡೆಗೆ ಒಟ್ಟುಗೂಡಿಸುತ್ತಿದೆ. ನಾವು ನಮ್ಮ ಶಕ್ತಿಯನ್ನು ತೋರಿಸುತ್ತಿದ್ದೇವೆ. ನಾವು ಕುಗ್ಗುವುದಿಲ್ಲ ಎಂದು ಅವರು ಹೇಳಿದರು.
ಉಕ್ರೇನ್ ಮೇಲೆ ರಷ್ಯಾ ದಯೆಯಿಲ್ಲದ ಆಕ್ರಮಣ ಮುಂದುವರಿಸುತ್ತಿದ್ದಂತೆ, ಯುನೈಟೆಡ್ ಸ್ಟೇಟ್ಸ್ ಮತ್ತು ಮಿತ್ರರಾಷ್ಟ್ರಗಳು, ಪಾಲುದಾರರು ಪುಟಿನ್ ಮೇಲೆ ತಮ್ಮ ಆರ್ಥಿಕ ಒತ್ತಡವನ್ನು ಹೆಚ್ಚಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ರಷ್ಯಾವನ್ನು ಮತ್ತಷ್ಟು ಪ್ರತ್ಯೇಕಿಸುವುದನ್ನು ಮುಂದುವರೆಸಿದ್ದಾರೆ ಎಂದು ಅವರು ಹೇಳಿದರು.
ಮಿತ್ರರಾಷ್ಟ್ರ ಈ ಸ್ಥಾನಮಾನ ಹಿಂತೆಗೆದುಕೊಳ್ಳುವುದರಿಂದ ಯುನೈಟೆಡ್ ಸ್ಟೇಟ್ಸ್ ನೊಂದಿಗೆ ವ್ಯಾಪಾರ ಮಾಡಲು ರಷ್ಯಾಕ್ಕೆ ಕಷ್ಟವಾಗುತ್ತದೆ. ಜಾಗತಿಕ ಆರ್ಥಿಕತೆಯ ಅರ್ಧದಷ್ಟು ಭಾಗವಾಗಿರುವ ಇತರ ರಾಷ್ಟ್ರಗಳೊಂದಿಗೆ ಏಕರೂಪದಲ್ಲಿ ಇದನ್ನು ಮಾಡುವುದು ರಷ್ಯಾದ ಆರ್ಥಿಕತೆಗೆ ಮತ್ತೊಂದು ಹೀನಾಯ ಹೊಡೆತವಾಗಿದೆ. ಈಗಾಗಲೇ ರಷ್ಯಾ ಆರ್ಥಿಕ ನಷ್ಟದಿಂದ ಬಳಲುತ್ತಿದೆ ಎಂದು ಬಿಡೆನ್ ಹೇಳಿದರು.