ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ, ಪಾಕಿಸ್ತಾನ-ಚೀನಾ ಸಂಬಂಧವನ್ನು ಬಲಪಡಿಸಿದೆ ಎಂಬ ಹೇಳಿಕೆ ಸಧ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಈ ಬಗ್ಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ಪ್ರತಿಕ್ರಿಯಿಸಿದ್ದು, ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದಿದೆ. ಉಭಯ ದೇಶಗಳು ಅವರ ಪರವಾಗಿ ಅವರೆ ಮಾತನಾಡುತ್ತಾರೆ, ಬೇರೆ ದೇಶದ ವಿದೇಶಾಂಗ ನೀತಿಯಿಂದ ಇನ್ನುಳಿದ ರಾಷ್ಟ್ರಗಳ ಸಂಬಂಧ ಗಟ್ಟಿಯಾಗುವುದಿಲ್ಲ ಎಂದಿದೆ.
ಬುಧವಾರ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ಹೇಳಿಕೆ ಬಗ್ಗೆ ಕೇಳಿದಾಗ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ಪ್ರತಿಕ್ರಿಯಿಸಿ, ಪಾಕಿಸ್ತಾನ ಮತ್ತು ಚೈನಾದ ಸಂಬಂಧ ಅವರಿಗೆ ಬಿಟ್ಟದ್ದು, ಉಭಯ ದೇಶಗಳೆ ಮಾತನಾಡಿಕೊಳ್ಳಲಿ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಾನು ಖಂಡಿತವಾಗಿಯೂ ಅನುಮೋದಿಸುವುದಿಲ್ಲ ಎಂದಿದ್ದಾರೆ.
BIG NEWS: ಸಚಿವ ಸ್ಥಾನಕ್ಕಾಗಿ ಸಾಹುಕಾರ್ ಹೊಸ ಪ್ಲಾನ್; ಗೋವಾದಲ್ಲಿ ಪಡ್ನವೀಸ್ ಭೇಟಿಗೆ ಮುಂದಾದ ರಮೇಶ್ ಜಾರಕಿಹೊಳಿ
ಅಮೆರಿಕ ಮತ್ತು ಚೀನಾ ನಡುವೆ ಆಯ್ಕೆ ಮಾಡಿ ಎಂದು ಯುನೈಟೆಡ್ ಸ್ಟೇಟ್ಸ್ ಎಂದಿಗು ಕೇಳುವುದಿಲ್ಲ. ಈ ರೀತಿಯ ನಡವಳಿಕೆಯನ್ನ ಸ್ಟೇಟ್ಸ್ ಮೊದಲಿಂದಲು ಅಗತ್ಯವಲ್ಲದ ವಿಷಯವೆಂದೆ ಹೇಳಿದೆ. ಈಗಲೂ ಅಷ್ಟೇ, ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧವನ್ನ ಗೌರವಿಸುತ್ತೇವೆ ಎಂದು ಪ್ರೈಸ್ ಹೇಳಿದ್ದಾರೆ.
ನಮ್ಮೊಂದಿಗಾಗಲಿ ಉಳಿದ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ರಚಿಸಲು ಸ್ಟೇಟ್ಸ್ ಆಯ್ಕೆ ನೀಡುತ್ತದೆ. ಆದರೆ ಅಮೆರಿಕಾ ದೇಶದ ಸಂಬಂಧದಲ್ಲಿ ಸಾಕಷ್ಟು ಉಪಯೋಗಗಳಿವೆ, ಚೀನಾದೊಂದಿಗಿನ ಸಂಬಂಧದಲ್ಲಿ ಇವು ಕಾಣದಿರಬಹುದು ಎಂದು ಪ್ರೈಸ್ ಹೇಳಿದ್ದಾರೆ.