
ಬೆಂಗಳೂರು: ವಂಡರ್ ಲಾದಲ್ಲಿ ಎರಡು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಉಚಿತವಾಗಿ ಸಿಗಲಿದೆ. ವಂಡರ್ ಲಾ ಹಾಲಿಡೇಸ್ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆನ್ಲೈನ್ ನಲ್ಲಿ ಎರಡು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಅನ್ನು ಉಚಿತವಾಗಿ ಪಡೆಯುವ ವಿಶೇಷ ಕೊಡುಗೆ ಘೋಷಣೆ ಮಾಡಿದೆ.
ಈಗಾಗಲೇ ಆನ್ಲೈನ್ ಬುಕಿಂಗ್ ಆರಂಭವಾಗಿದೆ. ಆಗಸ್ಟ್ 15ರಿಂದ 19 ರವರೆಗೆ ವಂಡರ್ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಭೇಟಿ ನೀಡಬಹುದು. ವಂಡರ್ ಲಾ ಆನ್ಲೈನ್ ಪೋರ್ಟಲ್ https://bookings.wonderla.com/ ಮೂಲಕ ಮುಂಗಡ ಟಿಕೆಟ್ ಬುಕಿಂಗ್ ಕಾಯ್ದಿರಿಸಬಹುದಾಗಿದೆ. ಅಥವಾ ಗ್ರಾಹಕರು ನೇರವಾಗಿ ಪಾರ್ಕ್ ಕೌಂಟರ್ ಗಳಿಗೆ ತೆರಳಿ ಟಿಕೆಟ್ ಖರೀದಿಸಬಹುದು. ಹೆಚ್ಚಿನ ವಿವರಗಳಿಗಾಗಿ 80372 30333 ಸಂಪರ್ಕಿಸಬಹುದಾಗಿದೆ.