ಸಾಮಾನ್ಯವಾಗಿ ಹೆಚ್ಚಿನ ಜ್ಞಾನ ಮತ್ತು ಪ್ರತಿಭೆಯನ್ನು ಹೊಂದಿರುವವರನ್ನು ಚಾಣಾಕ್ಷನೆಂದು ಕರೆಯುತ್ತಾರೆ. ಅದನ್ನೂ ಮೀರಿ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್‌ಸ್ಟೈನ್ ಅವರ ಜ್ಞಾನವನ್ನು ವ್ಯಕ್ತಿಗೆ ಹೋಲಿಸಿ, ನೀನ್ ಬಿಡಪ್ಪಾ ಐನ್ ಸ್ಟೈನ್ ಎನ್ನುತ್ತೇವೆ. ಆದರೆ ಇದು ಸಾಮಾನ್ಯವಾಗಿ ವಯಸ್ಕರು ಅಥವಾ ಯುವಜನತೆಯ ಬುದ್ಧಿವಂತಿಕೆಗೆ ಹೊಂದುತ್ತದೆ.
ಆದರೆ ಎಳೆಯ ವಯಸ್ಸಲ್ಲೇ ಅಸಮಾನ್ಯ ಬುದ್ಧಿವಂತಿಕೆ ಹೊಂದಿರುವ ಅಂಬೆಗಾಲಿಡುವ ಮಗುವಿನ ಬುದ್ಧಿವಂತಿಕೆಯನ್ನ ಯಾವುದಕ್ಕೆ ಹೋಲಿಸಬೇಕು?. ಬುದ್ಧಿವಂತಿಕೆಯನ್ನು ಉಪಯೋಗಿಸಿ ಆಡುವ ಆಟವೊಂದರಲ್ಲಿ ಪುಟ್ಟ ಮಗು ಗೊತ್ತುಪಡಿಸಿದ ಸ್ಲಾಟ್‌ಗಳಲ್ಲಿ ಒಂದೇ ಬಣ್ಣದ ವೃತ್ತಾಕಾರದ ಬ್ಲಾಕ್‌ಗಳನ್ನು ಇರಿಸಬೇಕಾದ ಆಟವನ್ನು ಯಶಸ್ವಿಯಾಗಿ ಆಡಿ ಮುಗಿಸುತ್ತದೆ. ಯಾವುದೇ ಒತ್ತಡ ಅಥವಾ ಒತ್ತಡದ ಲಕ್ಷಣಗಳನ್ನು ತೋರಿಸದೆ ಮಗು ಆಟವನ್ನು ಪೂರ್ಣಗೊಳಿಸುತ್ತದೆ. ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಗುವಿನ ಬುದ್ಧಿವಂತಿಕೆಯ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.