alex Certify ಮಹಿಳಾ ಟಿ20 ಏಷ್ಯಾ ಕಪ್; ನಾಳೆ ಫೈನಲ್ ನಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಾಮುಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಟಿ20 ಏಷ್ಯಾ ಕಪ್; ನಾಳೆ ಫೈನಲ್ ನಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಾಮುಖಿ

ನಿನ್ನೆ ನಡೆದ ಮಹಿಳಾ ಟಿ20 ಏಷ್ಯಾ ಕಪ್ ನ ಸೆಮಿ ಫೈನಲ್ ಪಂದ್ಯಗಳಲ್ಲಿ ಭಾರತ ತಂಡ ಬಾಂಗ್ಲಾದೇಶದ ಎದುರು 10 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದರೆ, ಶ್ರೀಲಂಕಾ ತಂಡ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದೆ. ಈ ಮೂಲಕ  ಭಾರತ  ಹಾಗೂ ಶ್ರೀಲಂಕಾ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಿದ್ದು,  ಮಹಿಳಾ ಭಾರತ ತಂಡ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.

ನಾಳೆ ಡಾಂಬುಲ್ಲಾದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ಫೈನಲ್ ಪಂದ್ಯ ನಡೆಯುತ್ತಿದ್ದು, ಈ ರೋಮಾಂಚನಕಾರಿ ಪಂದ್ಯವನ್ನು ವೀಕ್ಷಿಸಲು ಭಾರತೀಯ ಅಭಿಮಾನಿಗಳು  ಕಾತುರದಿಂದ ಕಾಯುತ್ತಿದ್ದಾರೆ. ಉಭಯ ತಂಡಗಳು ಟಿ ಟ್ವೆಂಟಿ ಏಷ್ಯಾ ಕಪ್ ನಲ್ಲಿ ಇದುವರೆಗೂ ಒಂದು ಸೋಲನ್ನು ಕಾಣದೆ ಫೈನಲ್ ಪ್ರವೇಶಿಸಿದ್ದು ಈ  ಎರಡು ಬಲಿಷ್ಠ ತಂಡಗಳ ನಡುವೆ ಜಿದ್ದಾಜಿದ್ದಿ ಹೋರಾಟವಂತು ಇದ್ದೇ ಇರುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಮಹಿಳಾ ಟಿ20 ವಿಶ್ವಕಪ್ ಕೂಡ ಆರಂಭವಾಗಲಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ನಂತ ಬಲಿಷ್ಠ ತಂಡಗಳೊಂದಿಗೆ ಕಾದಾಡಲು ಮಹಿಳಾ ಭಾರತ ತಂಡ ಸಜ್ಜಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...