ಕೊರೊನಾ ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಲಾಕ್ಡೌನ್ ಜೊತೆಗೆ ಕೋವಿಡ್ ಭಯದಿಂದ ಜನರು ಮನೆಯಲ್ಲೇ ಬಂಧಿಯಾಗಿದ್ದರು. ಪೆಂಡಮಿಕ್ನಲ್ಲಿ ಕೋಟ್ಯಾಂತರ ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಈ ಎಲ್ಲಾ ಸಾವು-ನೋವುಗಳ ಜೊತೆಗೆ ಕೊರೊನಾ ಇನ್ನೂ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಅಧ್ಯಯನದ ಪ್ರಕಾರ ಕೊರೋನಾ ಬಳಿಕ ಅನೇಕ ಮಹಿಳೆಯರ ಲೈಂಗಿಕ ಬಯಕೆಗಳು ಕಡಿಮೆಯಾಗಿದೆ.
ಈ ಸಂಶೋಧನೆಯನ್ನು 2022ರ ಜನವರಿಯಲ್ಲಿ ಮಾಡಲಾಗಿದೆ. ಇದರಲ್ಲಿ ಒಟ್ಟು 21 ಅಧ್ಯಯನಗಳನ್ನು ವಿಶ್ಲೇಷಿಸಲಾಗಿದೆ ಮತ್ತು ಪುರುಷರಿಗಿಂತ ಮಹಿಳೆಯರು ಲೈಂಗಿಕ ಬಯಕೆಗಳೊಂದಿಗೆ ಹೆಚ್ಚು ಹೋರಾಡುತ್ತಿದ್ದಾರೆ ಎಂಬುದು ಕಂಡುಬಂದಿದೆ. ಈ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಕೂಡ ತಜ್ಞರು ವಿವರಿಸಿದ್ದಾರೆ.
ಭಾವನಾತ್ಮಕ ಸಂಪರ್ಕ ಮುಖ್ಯ
ಕೋವಿಡ್ -19 ಕಾರಣದಿಂದಾಗಿ ಅನೇಕ ಮಹಿಳೆಯರು ಒತ್ತಡಕ್ಕೆ ಒಳಗಾಗಿದ್ದಾರೆ. ಒತ್ತಡದ ಸಮಯದಲ್ಲಿ ಯಾವುದೇ ರೀತಿಯ ಬಯಕೆಗಳು ಮೂಡುವುದಿಲ್ಲ. ಇಂತಹ ಸಂದರ್ಭದಲ್ಲಿ ಲೈಂಗಿಕ ಬಯಕೆಯನ್ನು ಜಾಗೃತಗೊಳಿಸಲು ಬಯಸಿದರೆ ನಿಮ್ಮ ಸಂಗಾತಿ ಅಥವಾ ಪತಿಯೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸಿ.
ಗುಣಮಟ್ಟದ ಸಮಯ ನೀಡಿ
ಮದುವೆ ಅಥವಾ ಸಂಬಂಧದಲ್ಲಿ ಸುದೀರ್ಘ ಸಮಯದ ನಂತರ ಸಹಜವಾಗಿಯೇ ಲೈಂಗಿಕ ಬಯಕೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆದಾಗ ಮಾತ್ರ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಹಳೆಯ ಸಂತೋಷದ ದಿನಗಳನ್ನು ನೆನಪಿಸಿಕೊಳ್ಳಿ, ಸಂಗಾತಿಯೊಂದಿಗೆ ಹ್ಯಾಂಗ್ ಔಟ್ ಮಾಡಿ. ರೆಸ್ಟೋರೆಂಟ್ಗಳಿಗೆ ಹೋಗಿ. ಹೊರಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲೇ ಏನಾದರೂ ಒಳ್ಳೆ ಅಡುಗೆ ಮಾಡಿ ಊಟವನ್ನು ಒಟ್ಟಿಗೆ ತಿನ್ನಿ. ಒಟ್ಟಿಗೆ ಕುಳಿತು ನಿಮ್ಮ ನೆಚ್ಚಿನ ಸಿನೆಮಾ ಕೂಡ ವೀಕ್ಷಿಸಬಹುದು.
ಗುಣಮಟ್ಟದ ಲೈಂಗಿಕತೆಗೆ ಆದ್ಯತೆ
ಲೈಂಗಿಕತೆಯನ್ನು ಸಾಮಾನ್ಯ ಜೀವನದ ಭಾಗವೆಂದು ಪರಿಗಣಿಸುವುದು ದೊಡ್ಡ ತಪ್ಪು. ನಿಮ್ಮ ಲೈಂಗಿಕ ಸಂಬಂಧ ಗುಣಮಟ್ಟದಿಂದ ಕೂಡಿರಬೇಕು. ಮೊದಲು ಭೇಟಿಯಾದಾಗ ನಿಮ್ಮ ಸಂಗಾತಿಯೊಂದಿಗೆ ನಿಕಟವಾಗಿ ವರ್ತಿಸಿ. ಈ ರೀತಿ ಮಾಡದಿದ್ದರೆ ಸಂಬಂಧವು ನೀರಸವಾಗಿ ಉಳಿಯುತ್ತದೆ.
ಮೌಲ್ಯಮಾಪನ ಮಾಡಿ
ಸ್ವಲ್ಪ ಆತ್ಮೀಯತೆಯನ್ನು ಮರಳಿ ತರಲು ನೀವು ಮಾಡುತ್ತಿರುವ ಪ್ರಯತ್ನಗಳು ಸಾಕಾಗುತ್ತಿವೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಿ. ನಿಮ್ಮನ್ನು ಮೌಲ್ಯಮಾಪನ ಮಾಡಿಕೊಂಡಾಗ ಲೈಂಗಿಕ ಬಯಕೆಗಳು ಕ್ರಮೇಣ ಸುಧಾರಿಸುತ್ತವೆ.
ವೈದ್ಯರನ್ನು ಭೇಟಿ ಮಾಡಿ
ಸಂಭೋಗದ ಸಮಯದಲ್ಲಿ ತಮ್ಮ ಖಾಸಗಿ ಅಂಗಗಳಲ್ಲಿ ತೀವ್ರವಾದ ನೋವನ್ನು ಅನುಭವಿಸುವ ಅನೇಕ ಮಹಿಳೆಯರು ಇದ್ದಾರೆ. ಇದರಿಂದ ಅನ್ಯೋನ್ಯವಾಗಿರಲು ಹಿಂದೇಟು ಹಾಕುತ್ತಾರೆ. ಈ ರೀತಿಯ ಸಮಸ್ಯೆಯಿದ್ದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ. ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.