
ನಿನ್ನೆಯಿಂದ ದೆಹಲಿಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯಗಳು ನಡೆಯುತ್ತಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತನ್ನ ಹೋಮ್ ಗ್ರೌಂಡ್ ನಲ್ಲಿ ಡಿಪೆಂಡಿಂಗ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಜೊತೆ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲನೆಯ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ. ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿರುವ ಗುಜರಾತ್ ಜೈಂಟ್ಸ್ ಇನ್ನು ತನ್ನ ಮೊದಲ ಜಯದ ಹುಡುಕಾಟದಲ್ಲಿದೆ.
ಗುಜರಾತ್ ತಂಡಕ್ಕೆ ಉಳಿದಿರುವ ಇನ್ನೂ ನಾಲ್ಕು ಪಂದ್ಯಗಳಲ್ಲೂ ಜಯ ಸಿಕ್ಕರೆ ಮಾತ್ರ ಸೆಮಿಫೈನಲ್ ಗೆ ಬರುವ ಒಂದು ಅವಕಾಶವಿದೆ. ಇನ್ನುಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು ಈ ಬಾರಿ ಭರ್ಜರಿ ಫಾರ್ಮಲ್ಲಿದ್ದು, ತಮ್ಮ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಸಜ್ಜಾಗಿದ್ದಾರೆ.