ಮಹಿಳಾ ಕ್ರಿಕೆಟ್ ಪಂದ್ಯಗಳು ಕೂಡ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದು, ಇತ್ತೀಚೆಗೆ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಇದೇ ಫೆಬ್ರವರಿ 23ರಂದು ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಫೆಬ್ರವರಿ 23ರಿಂದ ಮಾರ್ಚ್ 13ರವರೆಗೆ ಒಟ್ಟಾರೆ 20 ಪಂದ್ಯಗಳು ನಡೆಯಲಿದ್ದು, ದೆಹಲಿಯಲ್ಲಿ ಎಲಿಮಿನೇಟರ್ ಹಾಗೂ ಫೈನಲ್ ನಡೆಯಲಿದೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯು ಪಿ ವಾರಿಯರ್ಸ್, ಗುಜರಾತ್, ಡೆಲ್ಲಿ ಕ್ಯಾಪಿಟಲ್ ಸೇರಿದಂತೆ ಐದು ತಂಡಗಳು ಈ ಲೀಗ್ ನಲ್ಲಿ ಸ್ಪರ್ಧಿಸಲಿವೆ.