alex Certify Free Bus Service : ಸರ್ಕಾರಿ ಬಸ್ ನಲ್ಲಿ ಮಹಿಳೆಯರದ್ದೇ ಕಾರುಬಾರು : ಸೀಟು ಹಿಡಿಯೋಕೆ ಡ್ರೈವರ್ ಸೀಟಿನಿಂದ ನುಗ್ಗಿದ ಗಂಡಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Free Bus Service : ಸರ್ಕಾರಿ ಬಸ್ ನಲ್ಲಿ ಮಹಿಳೆಯರದ್ದೇ ಕಾರುಬಾರು : ಸೀಟು ಹಿಡಿಯೋಕೆ ಡ್ರೈವರ್ ಸೀಟಿನಿಂದ ನುಗ್ಗಿದ ಗಂಡಸರು

ಹಾವೇರಿ : ಸರ್ಕಾರಿ ಬಸ್ ನಲ್ಲಿ ಮಹಿಳೆಯರದ್ದೇ ಕಾರುಬಾರು ಎಂಬಂತೆ ಸರ್ಕಾರಿ ಬಸ್ ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಉಚಿತ ಪ್ರಯಾಣಕ್ಕೆ ನಾರಿಯರು ಮುಗಿಬಿದ್ದಿದ್ದು, ಇತ್ತ ಕಡೆ ಗಂಡಸರು ಕೂಡ ಬಸ್ ನಲ್ಲಿ ಸೀಟು ಹಿಡಿಯಲು ಮುಗಿಬಿದ್ದಿದ್ದಾರೆ.

ಮಹಿಳೆಯರು ಸಿಕ್ಕ ಸಿಕ್ಕ ಸೀಟುಗಳಲ್ಲಿ ಕೂರುತ್ತಿರುವ ಹಿನ್ನೆಲೆ ಪುರುಷರಿಗೆ ಸೀಟು ಸಿಗದಂತೆ ಆಗುತ್ತಿದೆ. ಈ ಹಿನ್ನೆಲೆ ಹಾವೇರಿಯಲ್ಲಿ ಸೀಟು ಹಿಡಿಯಲು ಪುರುಷರು ಡ್ರೈವರ್ ಸೀಟ್ ನ ಡೋರ್ ನ್ನು ಬಳಸಿದ್ದಾರೆ. ಸದ್ಯ, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬಸ್ ನ ಹಿಂಬದಿ ಸೀಟು ಹಿಡಿಯೋಕೆ ಸಾಧ್ಯ ಆಗದ ಪುರುಷರು ಬಸ್ ನ ಡ್ರೈವರ್ ಸೀಟ್ ನ ಡೋರ್ ಮೂಲಕ ಒಳಗಡೆ ಬಂದಿದ್ದಾರೆ. ಇದನ್ನು ಪ್ರಯಾಣಿರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಆರಂಭಿಸಿದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲಾ ಧಾರ್ಮಿಕ ಸ್ಥಳಗಳುಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಜೂನ್ 11ರಂದು ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...