ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂಬ ಮಾತು ಆಗಾಗ್ಗೆ ಸಾಬೀತಾಗ್ತಾನೇ ಇರುತ್ತೆ. ಇದೀಗ ಕೆಲಸದ ವಿಚಾರದಲ್ಲೂ ಹೆಣ್ಮಕ್ಕಳೇ ಸ್ಟ್ರಾಂಗ್ ಆಗಿದ್ದಾರೆ. ಅಧ್ಯಯನ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚು ಶ್ರಮಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ನಿಯತಕಾಲಿಕೆ ಕರೆಂಟ್ ಬಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಫಲಿತಾಂಶಗಳ ಪ್ರಕಾರ ಪುರುಷರು ಸ್ತ್ರೀಯರಿಗಿಂತ ಕೆಲಸದಲ್ಲಿ ಕಡಿಮೆ ಶ್ರಮ ವಹಿಸುತ್ತಾರೆ ಎಂದು ತೋರಿಸಿದೆ.
ಈ ಅಧ್ಯಯನವು ಗ್ರಾಮೀಣ ಚೀನಾದ ಟಿಬೆಟಿಯನ್ ಗಡಿನಾಡಿನಲ್ಲಿ ಕೃಷಿ ಮತ್ತು ಹೈನುಗಾರಿಕೆ ನಡೆಸುವ ಸಮೂಹದ ವಿಶ್ಲೇಷಣೆಯನ್ನು ಒಳಗೊಂಡಿದೆ.
ವಾಸ್ತವವಾಗಿ ಮನೆಯಲ್ಲಿ ಯಾರು ಹೆಚ್ಚು ಕೆಲಸ ಮಾಡುತ್ತಾರೆ ಮತ್ತು ಏಕೆ ಎಂಬುದನ್ನ ಅಧ್ಯಯನ ಮಾಡಲಾಗಿದೆ.
ಮಹಿಳೆಯರು ದಿನಕ್ಕೆ ಸರಾಸರಿ 12,000 ಹೆಜ್ಜೆಗಳನ್ನು ನಡೆದರೆ, ಪುರುಷರು ಕೇವಲ 9,000 ಹೆಜ್ಜೆಗಳನ್ನು ನಡೆದರು ಎಂದು ಅಧ್ಯಯನ ಹೇಳಿದೆ. ಆದ್ದರಿಂದ ಪುರುಷರು ಸಹ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆದರೆ ಮಹಿಳೆಯರಿಗಿಂತ ಕಡಿಮೆ ಎಂಬಂತಾಗಿದೆ.
ವಿಶ್ವಸಂಸ್ಥೆಯ ಪ್ರಕಾರ ಮಹಿಳೆಯರು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾರೆ . ಆದಾಗ್ಯೂ, ಎಲ್ಲಾ ದೇಶಗಳಲ್ಲಿ ಲಿಂಗ ಅಸಮಾನತೆ ಬಹಳ ಹಿಂದಿನಿಂದಲೂ ಇದೆ. ಇದರ ನಡುವೆಯೂ ಕೆಲಸದ ದಕ್ಷತೆಯಲ್ಲಿ ಮಹಿಳೆಯೇ ಮುಂದು ಎಂಬುದು ಗೊತ್ತಾಗಿದೆ.