ಚರ್ಮದ ಮೇಲಿರುವ ಕೂದಲನ್ನ ತೆಗೆಯೋಕೆ ಹಲವಾರು ದಾರಿಗಳು ಇದ್ದರೂ ಸಹ ಬಹುತೇಕ ಮಹಿಳೆಯರೂ ವ್ಯಾಕ್ಸಿಂಗ್ ವಿಧಾನವನ್ನೇ ಆಯ್ಕೆ ಮಾಡಿಕೊಳ್ತಾರೆ. ಉಳಿದ ಎಲ್ಲಾ ವಿಧಾನಗಳಿಗಿಂತ ಚರ್ಮದ ಆರೋಗ್ಯದ ದೃಷ್ಟಿಯಿಂದ ಈ ವಿಧಾನ ಹೆಚ್ಚು ಸೂಕ್ತ ಎಂಬ ಕಾರಣಕ್ಕೆ ಮಹಿಳೆಯರು ವ್ಯಾಕ್ಸಿಂಗ್ ಮೊರೆ ಹೋಗುತ್ತಾರೆ. ಆದರೆ ಬಹುತೇಕ ಮಹಿಳೆಯರಿಗೆ ವ್ಯಾಕ್ಸಿಂಗ್ ವೇಳೆ ಉಂಟಾಗುವ ನೋವನ್ನ ತಡೆದುಕೊಳ್ಳೋದೇ ಒಂದು ದೊಡ್ಡ ಸವಾಲಿನ ವಿಚಾರವಾಗಿದೆ. ಆದರೆ ಕೆಲವೊಂದು ಸುಲಭದ ವಿಧಾನಗಳನ್ನ ಅನುಸರಿಸೋದ್ರಿಂದ ವ್ಯಾಕ್ಸಿಂಗ್ ವೇಳೆ ಉಂಟಾಗುವ ನೋವನ್ನ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಇದು ಬಹಳ ಸಣ್ಣ ಸಲಹೆ ಎನಿಸಬಹುದು. ಆದರೂ ಎಂದಿಗೂ ವ್ಯಾಕ್ಸಿಂಗ್ ವೇಳೆ ಅನುಭವಿ ಪಾರ್ಲರ್ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಸರಿಯಾದ ವಿಧಾನದಲ್ಲಿ ವ್ಯಾಕ್ಸಿಂಗ್ ಮಾಡಿದ್ರೆ ಯಮ ಯಾತನೆ ಎನಿಸುವಷ್ಟರ ಮಟ್ಟಿಗೆ ನೋವು ಉಂಟಾಗೋದಿಲ್ಲ.
ವ್ಯಾಕ್ಸಿಂಗ್ ಮಾಡೋದಕ್ಕೂ ಮುನ್ನ ಬಾಡಿ ಸ್ಕ್ರಬ್ ಮಾಡಿಕೊಳ್ಳೋದು ಒಳ್ಳೆಯ ಐಡಿಯಾ ಆಗಿದೆ. ಈ ರೀತಿ ಮಾಡೋದ್ರಿಂದ ನಿಮ್ಮ ಚರ್ಮಕ್ಕೆ ಅಂಟಿಕೊಂಡಿರುವ ಡೆಡ್ ಸೆಲ್ಸ್ ನಾಶವಾಗಲಿದೆ. ಇದರಿಂದ ನಿಮಗೆ ನೋವು ಕಡಿಮೆಯಾಗಲಿದೆ.
ಟೋನರ್ಗಳನ್ನ ಬಳಕೆ ಮಾಡಬೇಡಿ. ಟೋನರ್ಗಳಿಂದ ಕೂದಲು ಚರ್ಮವನ್ನ ಗಟ್ಟಿಯಾಗಿ ಹಿಡಿದುಕೊಳ್ಳುತ್ತೆ. ಇದರಿಂದಾಗಿ ಟೋನರ್ ಬಳಕೆಯಿಂದ ನೋವು ಹೆಚ್ಚಾಗಲಿದೆ.
ಕೆಲವರು ವ್ಯಾಕ್ಸಿಂಗ್ ಮಾಡೋದಕ್ಕೂ ಮುನ್ನ ಐಸ್ನಿಂದ ಮಸಾಜ್ ಮಾಡಿಕೊಳ್ತಾರೆ. ಇದರಿಂದ ನೋವು ಕಡಿಮೆಯಾಗುತ್ತೆ ಎಂದು ಹಲವರು ನಂಬಿದ್ದಾರೆ. ಆದರೆ ಐಸ್ಗಳನ್ನ ಬಳಕೆ ಮಾಡೋದ್ರಿಂದ ನಿಮ್ಮ ಚರ್ಮದ ರಂಧ್ರಗಳು ಟೈಟ್ ಆಗುತ್ತವೆ. ಇದರಿಂದ ನೋವು ಹೆಚ್ಚಾಗುತ್ತದೆ.
ಇನ್ನು ಯಾವ ಜಾಗದಲ್ಲಿ ವ್ಯಾಕ್ಸಿಂಗ್ ಮಾಡಿಕೊಳ್ತಾ ಇದ್ದೀರಿ ಅನ್ನೋದ್ರ ಬಗ್ಗೆಯೂ ಗಮನ ನೀಡಿ. ಉದಾಹರಣೆಗೆ ಗಾಯವಾದಲ್ಲಿ, ಬಿಸಿಲಿನ ಶಾಖ ಅತಿಯಾಗಿ ತಾಗಿದ ಜಾಗದಲ್ಲಿ, ಮೊಡವೆ ಮೂಡಿದಲ್ಲಿ ವ್ಯಾಕ್ಸ್ ಮಾಡೋದು ಅತಿಯಾದ ನೋವಿಗೆ ಕಾರಣವಾಗುತ್ತೆ.