ವಯಸ್ಸಾದಂತೆ ಮಹಿಳೆಯರು ಮೂಳೆ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ 30 ವರ್ಷಗಳ ನಂತರ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವು ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಬೇಕು.
ಹಸಿರು ತರಕಾರಿ: ಪಾಲಕ್, ಮೆಂತ್ಯದಂತಹ ಸೊಪ್ಪನ್ನು ಸೇವಿಸಬೇಕು. ಇವು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿವೆ. ಈ ಸೊಪ್ಪಿನಲ್ಲಿ ಎ, ಸಿ ಮತ್ತು ಕೆ ವಿಟಮಿನ್ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಅವಶ್ಯಕ. ಈ ಸೊಪ್ಪುಗಳನ್ನು ಸಲಾಡ್‌ನಲ್ಲಿ ಬಳಸಬಹುದು, ಪಲ್ಯ ಅಥವಾ ಇನ್ನಿತರ ತಿನಿಸುಗಳಲ್ಲೂ ಬಳಕೆ ಮಾಡಬಹುದು.
ಕಾಳುಗಳು ಮತ್ತು ಬೀನ್ಸ್: ಕಾಳುಗಳು ಮತ್ತು ದ್ವಿದಳ ಧಾನ್ಯಗಳು, ಪ್ರೋಟೀನ್, ಫೈಬರ್ ಹಾಗೂ ಕ್ಯಾಲ್ಸಿಯಂನ ಉತ್ತಮ ಮೂಲವಾಗಿವೆ. ಆಹಾರದಲ್ಲಿ ಹೆಸರುಬೇಳೆ, ಮಸೂರ್ ದಾಲ್, ಕಿಡ್ನಿ ಬೀನ್ಸ್ ಮತ್ತು ಕಡಲೆಗಳಂತಹ ಕಾಳುಗಳನ್ನು ಸೇವನೆ ಮಾಡಬೇಕು. ಅವುಗಳನ್ನು ಸೂಪ್, ದಾಲ್ ಅಥವಾ ಸಲಾಡ್ ರೂಪದಲ್ಲಿ ತಿನ್ನಬಹುದು.
ಎಳ್ಳು: ಎಳ್ಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಇದು ಮೂಳೆಯ ಆರೋಗ್ಯಕ್ಕೆ ಪ್ರಯೋಜನಕಾರಿ. ಎಳ್ಳನ್ನು ಹಲವು ವಿಧಾನಗಳಲ್ಲಿ ಸೇವನೆ ಮಾಡಬಹುದು.
ಹಾಲು ಮತ್ತು ಡೈರಿ ಉತ್ಪನ್ನಗಳು : ಹಾಲು, ಮೊಸರು, ಚೀಸ್ ಮತ್ತು ಮಜ್ಜಿಗೆ ಕ್ಯಾಲ್ಸಿಯಂನ ಅತ್ಯುತ್ತಮ ಮೂಲಗಳಾಗಿವೆ. ವಿಟಮಿನ್ ಡಿ ಕೂಡ ಅವುಗಳಲ್ಲಿ ಸಮೃದ್ಧವಾಗಿದೆ. ಇದು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಸೇರಿಸಿಕೊಳ್ಳಬೇಕು.
ಸೋಯಾಬೀನ್ : ಸೋಯಾಬೀನ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಇವೆರಡರ ಉತ್ತಮ ಮೂಲವಾಗಿದೆ. ಮೂಳೆಗಳನ್ನು ಬಲಪಡಿಸಲು ಸೋಯಾಬೀನ್ ಸಹಾಯ ಮಾಡುತ್ತಿದೆ. ಸೋಯಾ ಮಿಲ್ಕ್ ಅಥವಾ ತೋಫು ಸೇವನೆ ಮಾಡುವುದು ಉತ್ತಮ.