ದಾಂಪತ್ಯ ಜೀವನ ಗಟ್ಟಿಯಾಗಿರಬೇಕೆಂದ್ರೆ ಪರಸ್ಪರ ಗೌರವ, ವಿಶ್ವಾಸ ಬಹಳ ಮುಖ್ಯ. ಮದುವೆ ನಂತ್ರ ಇಬ್ಬರ ಬಾಳು ಬದಲಾಗುತ್ತದೆ. ಒಂದೇ ಸೂರಿನಡಿ ಬದುಕುವ ದಂಪತಿ ನಿಧಾನವಾಗಿ ಎಲ್ಲವನ್ನು ಕಲಿಯಲು ಶುರು ಮಾಡ್ತಾರೆ. ಇಬ್ಬರು ಅನೇಕ ಸಂಗತಿಗಳನ್ನು ಪರಸ್ಪರ ಹಂಚಿಕೊಳ್ತಾರೆ. ಪತಿ ಕಚೇರಿಗೆ ಹೋದಾಗ ಹೇಗೆ ಸಮಯ ಕಳೆದೆ ಎಂಬುದರಿಂದ ಹಿಡಿದು ಹವ್ಯಾಸದವರೆಗೆ ಅನೇಕ ಸಂಗತಿಯನ್ನು ಹಂಚಿಕೊಳ್ತಾಳೆ ಪತ್ನಿ. ಆದ್ರೆ ಕೆಲವೊಂದು ವಿಷ್ಯಗಳನ್ನು ಎಂದಿಗೂ ಪತಿ ಜೊತೆ ಹಂಚಿಕೊಳ್ಳುವ ಸಾಹಸಕ್ಕೆ ಹೋಗುವುದಿಲ್ಲ. ಕೆಲ ಮಹಿಳೆಯರು ಯಾವ ಸಂಗತಿಯನ್ನು ಹಂಚಿಕೊಂಡಿಲ್ಲ ಎಂಬುದನ್ನು ವಿವರಿಸಿದ್ದಾರೆ.
ಬಹುತೇಕ ಮಹಿಳೆಯರು ಹಳೆ ಸಂಬಂಧದ ಬಗ್ಗೆ ಪತಿ ಮುಂದೆ ಹೇಳುವುದಿಲ್ಲ. ಹಿಂದೆ ಹಳೆ ಸಂಗಾತಿ ಜೊತೆ ಕಳೆದ ರೋಮ್ಯಾಂಟಿಕ್ ಕ್ಷಣಗಳನ್ನು ಹೇಳಿಕೊಳ್ಳುವುದಿಲ್ಲ. ಮದುವೆಯಾಗಿ ಒಂದು ವರ್ಷವಾಗಿರಲಿ ಅಥವಾ ನಾಲ್ಕೈದು ವರ್ಷವಾಗಿರಲಿ. ಬಹುತೇಕ ಮಹಿಳೆಯರು ಹಳೆಯದನ್ನು ಮರೆತು ವರ್ತಮಾನದಲ್ಲಿ ಬದುಕುವುದನ್ನು ಕಲಿಯುತ್ತಾರೆ. ಹಾಗಾಗಿ ಅವರ ಭೂತಕಾಲ ಅವರ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪತಿ ಇದ್ರ ಬಗ್ಗೆ ತಪ್ಪಾಗಿ ತಿಳಿದ್ರೆ ಎಂಬ ಭಯಕ್ಕೆ, ಸಂಬಂಧ ಹಾಳು ಮಾಡಿಕೊಳ್ಳಲು ಇಚ್ಛಿಸದ ಮಹಿಳೆಯರು ಇದನ್ನು ಮುಚ್ಚಿಡುತ್ತಾರೆ.
ಕೆಲ ಮಹಿಳೆಯರು ಗಂಡನನ್ನು ನಿಜವಾಗಿಯೂ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಆದರೆ ಕೆಲವೊಮ್ಮೆ ಗಂಡನನ್ನು ಮಾಜಿ ಗೆಳೆಯನೊಂದಿಗೆ ಹೋಲಿಸುತ್ತಾರೆ. ಮದುವೆಗೆ ಇದು ಆರೋಗ್ಯಕರವಲ್ಲ ಎಂಬುದು ಅವರಿಗೆ ಗೊತ್ತಿರುತ್ತದೆ. ಇದೇ ಕಾರಣಕ್ಕೆ ಹಳೆ ವಿಷ್ಯವನ್ನು ಪತಿಗೆ ಹೇಳದೆ ಅದನ್ನು ಮನಸ್ಸಿನಲ್ಲಿಯೇ ಕೊಲ್ಲುವ ಯತ್ನ ನಡೆಸುತ್ತಾರೆ.
ಅತ್ತೆ – ಮಾವನ ಸಂಬಂಧಗಳನ್ನು ಕೂಡ ಪತಿ ಮುಂದೆ ಹೇಳಲು ಕೆಲವರು ಹಿಂಜರಿಯುತ್ತಾರೆ. ಮದುವೆಯಾದಾಗಿನಿಂದ ಸಮಸ್ಯೆ ಎದುರಿಸುವ ಮಹಿಳೆಯರು ಎಂದೂ ಇದನ್ನು ಹೇಳುವುದಿಲ್ಲ. ಎದುರಿಗೆ ಖುಷಿಯಾಗಿರುವ ನಾಟಕವಾಡ್ತಾರೆ. ಎಂದಿಗೂ ಅತ್ತೆ-ಮಾವ ನನ್ನನ್ನು ಮಗಳಂತೆ ನೋಡಲು ಸಾಧ್ಯವಿಲ್ಲ ಎಂಬ ಸತ್ಯದೊಂದಿಗೆ ಬದುಕುತ್ತಾರೆ.
ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಯನ್ನು ಸರಿಯಾಗಿ ನಡೆಸಲು ನನ್ನ ವೃತ್ತಿಜೀವನವನ್ನು ತ್ಯಜಿಸಿದೆ. ನನ್ನ ಪತಿ ಪ್ರತಿದಿನ ಕಚೇರಿಯಿಂದ ತಡವಾಗಿ ಮನೆಗೆ ಹಿಂದಿರುಗುತ್ತಾನೆ. ಮನೆಕೆಲಸಗಳಲ್ಲಿ ಅವನು ಸಹಾಯ ಮಾಡುತ್ತಾನೆಂದು ನಾನು ನಿರೀಕ್ಷಿಸುವುದಿಲ್ಲ. ಆದರೆ ಸ್ವಲ್ಪ ಮೆಚ್ಚುಗೆ ನಿರೀಕ್ಷಿಸುತ್ತೇನೆ. ಆದರೆ ನನ್ನ ಕಠಿಣ ಪರಿಶ್ರಮವನ್ನು ಅವನು ಎಂದೂ ಮೆಚ್ಚಿಲ್ಲ. ನಾನು ಕೃತಜ್ಞತೆಯಿಲ್ಲದ ಕೆಲಸವನ್ನು ಮಾಡುತ್ತಿದ್ದೇನೆ ಎಂಬ ಸತ್ಯ ಅರಿತಿದ್ದೇನೆ. ನನ್ನ ವೃತ್ತಿ ಜೀವನವನ್ನು ತ್ಯಜಿಸಿದ ಬೇಸರ ಸದಾ ನನಗಿದೆ ಎಂಬ ಬೇಸರವನ್ನು ಮಹಿಳೆಯರು ಬಾಯ್ಬಿಡುವುದಿಲ್ಲ.
ಮಹಿಳೆಯರು ಅನೇಕ ಬಾರಿ ಅತ್ತೆ ವಿಷ್ಯದಲ್ಲಿ ಗಂಡ ತಾರತಮ್ಯ ಮಾಡುತ್ತಾನೆಂಬ ಆರೋಪ ಮಾಡ್ತಾರೆ. ಸದಾ ತಾಯಿ ಪರ ಮಾತನಾಡುವ ಪತಿಗೆ ಈ ವಿಷ್ಯ ತಿಳಿಸಲಾಗದೆ ಅತ್ತು ಸುಮ್ಮನ್ನಾಗ್ತಾರೆ.
ತವರು ಮನೆ ಬಗ್ಗೆ ಹಾಗೂ ಸಂಬಂಧಿಕರ ಬಗ್ಗೆ ಮಹಿಳೆಯರಿಗೆ ವಿಶೇಷ ಕಾಳಜಿಯಿರುತ್ತದೆ. ಎಂದೂ ತಮ್ಮ ತವರು ಮನೆಯ ಗಾಸಿಪ್ ಗಳನ್ನು ಗಂಡನ ಮುಂದೆ ಹಂಚಿಕೊಳ್ಳುವುದಿಲ್ಲ. ಹಾಗೆ ಪತಿ-ಪತ್ನಿ ವಿಷ್ಯದಲ್ಲಿ ತಾಯಿ ಮಧ್ಯೆ ಬರುವುದನ್ನು ಎಂದೂ ಬಯಸುವುದಿಲ್ಲ. ಆದ್ರೆ ಇದನ್ನು ಪತಿಗೆ ಹೇಳುವುದಿಲ್ಲ.
ಸೆಕ್ಸ್ ವಿಷ್ಯದಲ್ಲೂ ಅನೇಕ ಸಂಗತಿಯನ್ನು ಮಹಿಳೆಯರು ಹೇಳುವುದಿಲ್ಲ. ಫೋರ್ ಪ್ಲೇಗೆ ಕಡಿಮೆ ಒತ್ತು ನೀಡುವ ಪತಿ ಲೈಂಗಿಕ ವಿಷ್ಯದಲ್ಲಿ ಹೊಂದಿಕೊಳ್ಳುವುದಿಲ್ಲ ಎಂಬ ಸಂಗತಿಯನ್ನು ಪತಿಗೆ ಹೇಳಲು ಕಾಯುತ್ತಾರೆಯೇ ವಿನಃ ಬಹುತೇಕ ಮಹಿಳೆಯರು ಸೆಕ್ಸ್ ವಿಷ್ಯದಲ್ಲಿ ನಾನು ತೃಪ್ತಿಗೊಂಡಿಲ್ಲ ಎಂಬುದನ್ನು ಪತಿಗೆ ಹೇಳುವುದಿಲ್ಲ.