ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಸ್ತನಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಈ ರೋಗ ಲಕ್ಷಣವನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ಇದು ಜೀವಕ್ಕೆ ಅಪಾಯ. ಹಾಗಾಗಿ ಈ ಸ್ತನ ಕ್ಯಾನ್ಸರ್ ಬರದಂತೆ ತಡೆಯಲು ಈ ಯೋಗಾಸನವನ್ನು ಅಭ್ಯಾಸ ಮಾಡಿ.
ಅರ್ಧ ಮತ್ಸ್ಯೇಂದ್ರಸನ : ಈ ಭಂಗಿ ಮಾಡುವಾಗ ಕಾಲುಗಳನ್ನು ಮುಂಭಾಗಕ್ಕೆ ಹರಡಿ ಚಾಪೆಯ ಮೇಲೆ ಕುಳಿತುಕೊಳ್ಳಿ. ನಂತರ ಎಡಗಾಲನ್ನು ಬಗ್ಗಿಸಿ ಎಡ ಪಾದವನ್ನು ಬಲ ಮೊಣಕಾಲಿನ ಮುಂದೆ ಇರಿಸಿ. ಈಗ ನಿಮ್ಮ ತಲೆಯನ್ನು ನಿಧಾನವಾಗಿ ಎಡಕ್ಕೆ ಬಾಗಿಸಿ. ನಂತರ ಬಲಗೈಯನ್ನು ಎಡ ಮೊಣಕಾಲಿನ ಮೇಲೆ ಮತ್ತು ಎಡಗೈಯನ್ನು ಹಿಂದೆ ಇರಿಸಿ. ನೇರವಾಗಿ ಕುಳಿತುಕೊಳ್ಳಿ. ನಿಧಾನವಾಗಿ ಉಸಿರಾಡಿ. ಬಳಿಕ ಇದನ್ನು ಇನ್ನೊಂದು ಬದಿಯಿಂದ ಪುನರಾವರ್ತಿಸಿ.
ಗೋಮುಖಾಸನ : ಮೊದಲು ನೆಲದ ಮೇಲೆ ಕುಳಿತು ನಿಮ್ಮ ಸೊಂಟವನ್ನು ನೇರವಾಗಿ ಇರಿಸಿ. ನಂತರ ಒಂದು ಪಾದವನ್ನು ಇನ್ನೊಂದು ಕಾಲಿನ ಮೇಲೆ ಇರಿಸಿ. ನಿಮ್ಮ ಎಡಗೈಯನ್ನು ಮೊಣಕೈ ಬಗ್ಗಿಸಿ ಭುಜದಿಂದ ಬೆನ್ನಿನ ಹಿಂದೆ ಇರಿಸಿ. ಹಾಗೇ ಬಲಗೈಯನ್ನು ಬೆನ್ನಿನ ಹಿಂಭಾಗದಲ್ಲಿ ಇರಿಸಿ ಎರಡು ಕೈಗಳನ್ನು ಹಿಡಿದುಕೊಳ್ಳಿ, ಆಗ ನಿಮ್ಮ ಬೆನ್ನು ನೇರವಾಗಿರಲಿ.