ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಎಲ್ಲರೂ ಪ್ರತಿದಿನ ದೇವರನ್ನು ಪೂಜಿಸುತ್ತಾರೆ. ಜ್ಯೋತಿಷ್ಯ ಮತ್ತು ವಾಸ್ತು ನಿಯಮಗಳಿಗೆ ತಕ್ಕಂತೆಯೇ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ಆದರೆ ನಮಗೆ ತಿಳಿದೋ ಅಥವಾ ತಿಳಿಯದೆಯೋ ಕೆಲವು ತಪ್ಪುಗಳಾಗುತ್ತವೆ.
ಮಹಿಳೆಯರು ಬೆಳಗ್ಗೆ ಸ್ನಾನ ಮಾಡಿದ ನಂತರವೇ ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡಬೇಕು. ಇದು ಮನೆಯಲ್ಲಿ ಸಂತೋಷವನ್ನು ಕಾಪಾಡುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರವನ್ನು ನೀಡುತ್ತದೆ.
ತುಳಸಿ – ಮನೆಯಲ್ಲಿ ತುಳಸಿಯನ್ನು ನೆಟ್ಟು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಪೂಜೆಯ ನಂತರ ಮಹಿಳೆಯರು ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸುತ್ತಾರೆ. ಆದರೆ ತುಳಸಿಗೆ ಸ್ನಾನ ಮಾಡದೆ ನೀರು ಹಾಕಬಾರದು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಂಡು ಮನೆ ಬಿಟ್ಟು ಹೋಗುತ್ತಾಳೆ.
ಸಂಪತ್ತು – ಹಣ ಅಥವಾ ಸಂಪತ್ತು ಯಾರಿಗೆ ಇಷ್ಟವಿಲ್ಲ ? ಇದನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ಹಾಗಾಗಿ ಸ್ನಾನ ಮಾಡದೆ ಹಣವನ್ನು ಮುಟ್ಟಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ಮನೆಯಲ್ಲಿ ಬಡತನ ಬರಲು ಪ್ರಾರಂಭಿಸುತ್ತದೆ.
ಕೂದಲು – ಕೂದಲು ಬಾಚುವ ಮುನ್ನ ಸ್ನಾನ ಮಾಡಬೇಕು. ಬೆಳಗ್ಗೆ ಎದ್ದ ನಂತರ ಸ್ನಾನ ಮಾಡಿಕೊಂಡು ಬಳಿಕ ಕೂದಲನ್ನು ಬಾಚಿಕೊಳ್ಳಿ. ಸ್ನಾನ ಮಾಡದೇ ಕೂದಲು ಬಾಚುವುದರಿಂದ ಬಡತನ ಬರುತ್ತದೆ. ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ವಾಸಿಸಲು ಪ್ರಾರಂಭಿಸುತ್ತವೆ.
ಊಟ – ಸ್ನಾನ ಮಾಡದೇ ಅಡುಗೆ ಮನೆಗೆ ಹೋಗಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾಗುತ್ತಿದ್ದು, ಅನೇಕ ಮಹಿಳೆಯರು ಸ್ನಾನ ಮಾಡದೆಯೇ ಅಡುಗೆ ತಯಾರಿಸುತ್ತಾರೆ. ಈ ರೀತಿ ಮಾಡುವುದನ್ನು ತಪ್ಪಿಸಬೇಕು. ಸ್ನಾನ ಮಾಡದೇ ಊಟ-ಉಪಹಾರ ಕೂಡ ಮಾಡಬಾರದು. ಸ್ನಾನ ಮಾಡದೆ ಆಹಾರ ಸೇವಿಸಿದರೆ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿದೆ. ಇದರಿಂದ ನಕಾರಾತ್ಮಕ ಶಕ್ತಿ ಕೂಡ ಹರಡುತ್ತದೆ. ಮಹಿಳೆಯರು ಯಾವಾಗಲೂ ಸ್ನಾನ ಮಾಡಿದ ನಂತರವೇ ಆಹಾರವನ್ನು ತಯಾರಿಸಬೇಕು. ಆಹಾರವು ತಾಯಿ ಅನ್ನಪೂರ್ಣೆಯ ಸಂಕೇತವಾಗಿದೆ. ಮಹಿಳೆಯು ಸ್ನಾನ ಮಾಡದೆ ಅಡುಗೆ ಮಾಡಿದರೆ ಅದು ತಾಯಿ ಅನ್ನಪೂರ್ಣೆಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ.