ಮಹಿಳೆಯರು ದೇಹದ ಎಲ್ಲ ಅಂಗಗಳಂತೆ ಸ್ತನಗಳ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದ್ರೆ ಅನೇಕ ಸ್ತನದ ಸಮಸ್ಯೆ ಎದುರಿಸಬೇಕಾಗುತ್ತದೆ. ಜೊತೆಗೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಮಹಿಳೆಯರು ಸ್ತನ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಆಹಾರವನ್ನು ಅವಶ್ಯಕವಾಗಿ ಸೇವನೆ ಮಾಡಬೇಕು.
ತಜ್ಞರ ಪ್ರಕಾರ, ಸುಮಾರು ಶೇಕಡಾ 13 ರಷ್ಟು ಮಹಿಳೆಯರು, ಸ್ತನ ಕ್ಯಾನ್ಸರ್ ಸಮಸ್ಯೆಗೊಳಗಾಗ್ತಿದ್ದಾರೆ. ಇದು ಬರದಂತೆ ತಡೆಯಲು ಆಹಾರ ಬಹಳ ಮುಖ್ಯ.
ಬೆರ್ರಿ ಹಣ್ಣುಗಳು- ಬೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಸಾಲ್ಮನ್ ಮೀನು- ಸ್ತನ ಕ್ಯಾನ್ಸರ್ ತಡೆಗಟ್ಟಲು ಮಹಿಳೆಯರು ಸಾಲ್ಮನ್ ಮೀನುಗಳನ್ನು ಸೇವಿಸಬೇಕು. ಸಾಲ್ಮನ್ ನಂತಹ ಕೊಬ್ಬಿನ ಮೀನುಗಳಲ್ಲಿ ಸ್ತನ ಕ್ಯಾನ್ಸರ್ ತಡೆಗಟ್ಟುವ ಒಮೆಗಾ -3 ಕೊಬ್ಬಿನಾಮ್ಲಗಳು, ಸೆಲೆನಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.
ಬ್ರೊಕೊಲಿ- ಬ್ರೊಕೊಲಿಯಲ್ಲಿ ಗ್ಲುಕೋಸಿನೋಲೇಟ್ ಸಂಯುಕ್ತವಿದೆ. ಇದು ಹೆಚ್ಚಿನ ಪ್ರಮಾಣದ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಮಹಿಳೆಯರು ನಿಯಮಿತವಾಗಿ ಬ್ರೊಕೊಲಿಯನ್ನು ಸೇವಿಸಬೇಕು.
ಬೀನ್ಸ್ ಮತ್ತು ಧಾನ್ಯ- ಮಹಿಳೆಯರು ಬೀನ್ಸ್ ಮತ್ತು ಧಾನ್ಯವನ್ನು ಸೇವಿಸಬೇಕು. ಇದರಲ್ಲಿ ಫೈಬರ್ ಇದ್ದು, ಇದು ಸ್ತನ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ.