alex Certify ಟ್ರೋಲ್​ ಆದ ಪ್ರಧಾನಿಯನ್ನು ಬೆಂಬಲಿಸಿ ನೃತ್ಯ ಮಾಡಿದ ಮಹಿಳೆಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೋಲ್​ ಆದ ಪ್ರಧಾನಿಯನ್ನು ಬೆಂಬಲಿಸಿ ನೃತ್ಯ ಮಾಡಿದ ಮಹಿಳೆಯರು…!

ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್​ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.‌

ಫಿನ್ನಿಷ್​ ಪ್ರಧಾನ ಮಂತ್ರಿಯು ತನ್ನ ಸ್ನೇಹಿತರೊಂದಿಗೆ ಹಾಡು, ಡ್ಯಾನ್ಸ್​ನೊಂದಿಗೆ ಪಾರ್ಟಿ ಮಾಡುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ನಂತರ, ಮರಿನ್​ ಟೀಕೆಗಳನ್ನು ಎದುರಿಸಿದರು.

ಕೆಲವರು ಅವರು ಡ್ರಗ್​ ಪರೀಕ್ಷೆಗೆ ಒಳಪಡಬೇಕೆಂದು ಒತ್ತಾಯಿಸಿದರು. ಈಗ, ಫಿನ್​ಲ್ಯಾಂಡ್​ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಮಹಿಳೆಯರು ಫಿನ್​ಲ್ಯಾಂಡ್​ ಪ್ರಧಾನಿಗೆ ತಮ್ಮ ಬೆಂಬಲವನ್ನು ತೋರಿಸಲು ನೃತ್ಯ ಮಾಡುತ್ತಿರುವ ವಿಡಿಯೊಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ.

ಸಾಲಿಡಾರಿಟಿ ವಿತ್​ ಸನ್ನಾ ಎಂಬ ಹ್ಯಾಶ್​ಟ್ಯಾಗ್​ ಬಳಸಿ ತಮ್ಮ ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಿದ್ದು, ಹಾಡುವುದು, ಡ್ಯಾನ್ಸ್​ ಮಾಡಿ ಆನಂದಿಸಿ ವಿಡಿಯೋ ಹಾಕುತ್ತಿದ್ದಾರೆ.

ಫಿನ್​ಲ್ಯಾಂಡ್​ ಪ್ರಧಾನಿಯವರು ತಮ್ಮ ವಿಡಿಯೋ ವೈರಲ್​ ಆದ ಕೂಡಲೇ ತನ್ನ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪಾರ್ಟಿ ವೇಳೆ ಮಾತ್ರ ಮದ್ಯ ಸೇವಿಸಿದ್ದೆ ಎಂದು ಹೇಳಿದ್ದಾರೆ. ವಿಡಿಯೋ ರೆಕಾರ್ಡ್​ ಆಗುತ್ತಿರುವ ಬಗ್ಗೆ ತನಗೆ ತಿಳಿದಿತ್ತು ಎಂದಿರುವ ಅವರು ವಿಡಿಯೋ ಸಾರ್ವಜನಿಕವಾಗಿ ವೈರಲ್​ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

36 ವರ್ಷದ ಸನ್ನಾ ಮರಿನ್​ ಅವರು ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. ಕಳೆದ ವರ್ಷ ಅವರು ಕೋವಿಡ್​ ಪಾಸಿಟಿವ್​ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ನಂತರ ಕ್ಲಬ್ಬಿಗೆ​ ಹೋಗಿದ್ದಕ್ಕಾಗಿ ಕ್ಷಮೆಯಾಚಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...