ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಾದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ಶೇಕಡಾ 33ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ, ಪೊಲೀಸ್ ಪಡೆಗೆ ಸೂಚನೆ ನೀಡಿದೆ. ಪ್ರಸ್ತುತ ಮಹಿಳಾ ಪೊಲೀಸ್ ಸಿಬ್ಬಂದಿ ಸಂಖ್ಯೆ ಶೇಕಡಾ 10.50ರಷ್ಟಿದೆ. ಅಂದ್ರೆ 20,91,488 ಪೊಲೀಸ್ ಸಿಬ್ಬಂದಿಯಲ್ಲಿ, ಮಹಿಳಾ ಪೊಲೀಸ್ ಸಿಬ್ಬಂದಿ ಸಂಖ್ಯೆ 2,15,504 ಆಗಿದೆ.
ಜನವರಿ 1, 2020 ರಂದು ಬ್ಯೂರೋ ಆಫ್ ಪೋಲಿಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಬಿಡುಗಡೆ ಮಾಡಿದ ಪೊಲೀಸ್ ಸಂಸ್ಥೆಗಳ ಇತ್ತೀಚಿನ ಮಾಹಿತಿಯ ಪ್ರಕಾರ, ಇದು ಕಳವಳಕಾರಿ ವಿಷಯವಾಗಿದೆ. ಮಹಿಳಾ ಪೊಲೀಸ್ ಸಂಖ್ಯೆ ಕಡಿಮೆಯಿರುವುದು, ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳನ್ನು ನಿಭಾಯಿಸುವುದು ಸವಾಲಿನ ವಿಷ್ಯವಾಗಿದೆ. ಅತ್ಯಾಧುನಿಕ ಮಟ್ಟದಲ್ಲಿ ಮಹಿಳಾ ಪೊಲೀಸರು ಕಾಣಿಸಿಕೊಳ್ಳುವುದು ಅಗತ್ಯವಾಗಿದೆ.
ಸಶಸ್ತ್ರ ಪೊಲೀಸ್ ಸೇರಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು ಮಂಜೂರಾದ ಪೊಲೀಸ್ ಪಡೆ 26,23,225. ಅದರಲ್ಲಿ 5,31,737 ಹುದ್ದೆಗಳು ಇನ್ನೂ ಖಾಲಿ ಇವೆ. ಪೊಲೀಸ್ ಪಡೆಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರವು ಕಾಲಕಾಲಕ್ಕೆ ರಾಜ್ಯಗಳಿಗೆ ಸಲಹೆಯನ್ನು ನೀಡುತ್ತಿದೆ. ಖಾಲಿಯಿರುವ ಪುರುಷ ಕಾನ್ಸ್ಟೇಬಲ್ ಹುದ್ದೆಯನ್ನು ಪರಿವರ್ತಿಸಿ, ಮಹಿಳಾ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ ಪೆಕ್ಟರ್ ಹುದ್ದೆ ಹೆಚ್ಚಿಸುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ.