ಕೋವಿಡ್‌ನಿಂದ ಸತತ ಎರಡು ಮೂರು ವರ್ಷ ಮಂಕಾಗಿದ್ದ ಹಬ್ಬಗಳ ಸಂಭ್ರಮ ಈಗ ಮರುಕಳಿಸುತ್ತಿದೆ, ಈಗ ಹಬ್ಬದ ಸೀಸನ್ ಮುಂದುವರಿದಿದ್ದು, ದೇಶವಾಸಿಗಳು ಹಬ್ಬದ ಆಚರಣೆಯ ಸಡಗರದಲ್ಲಿದ್ದಾರೆ.
ಈ ವಾರ ನವರಾತ್ರಿ ಪ್ರಾರಂಭವಾದಾಗಿನಿಂದ, ಜನರು ಗಾರ್ಬಾವನ್ನು ಪ್ರದರ್ಶಿಸುವ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಮರೈನ್ ಡ್ರೈವ್‌ನಲ್ಲಿ ಉತ್ಸಾಹದಿಂದ ಗಾರ್ಬಾವನ್ನು ಪ್ರದರ್ಶಿಸುವ ಜನರ ದೊಡ್ಡ ಗುಂಪಿನ ವೀಡಿಯೊ ವೈರಲ್ ಆದ ಬಳಿಕ ಈಗ, ಚಲಿಸುತ್ತಿರುವ ಲೋಕಲ್ ರೈಲಿನಲ್ಲಿ ಮಹಿಳೆಯರ ಗುಂಪೊಂದು ಅದೇ ರೀತಿ ಡ್ಯಾನ್ಸ್ ಮಾಡುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಮುಂಬೈ ರೈಲ್ವೇ ಯೂಸರ್ಸ್ ಎಂಬ ಪೇಜ್ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಕಲ್ಯಾಣ್‌ನಿಂದ ಸ್ಥಳೀಯ ರೈಲಿನಲ್ಲಿ ಮಹಿಳೆಯರ ಗಾರ್ಬಾ ಪ್ರದರ್ಶನವನ್ನು ಕಾಣಬಹುದು. ಅವರು ಉತ್ಸಾಹದಿಂದ ನೃತ್ಯ ಮಾಡುವಾಗ ಇತರ ಪ್ರಯಾಣಿಕರು ಆನಂದಿಸಿದರು ಮತ್ತು ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ನೆಟ್ಟಿಗರು ಮಹಿಳೆಯರ ಆತ್ಮವಿಶ್ವಾಸವನ್ನು ಇಷ್ಟಪಟ್ಟು ಕಾಮೆಂಟ್‌ಗಳ ಬಾಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಹೃದಯಸ್ಪರ್ಶಿಯಾಗಿದೆ. ಈ ಮಹಿಳೆಯರಿಗೆ ಗಾರ್ಬಾ ಮಾಡಲು ಜಾಗ ಸಿಗುವಂತೆ ಪಕ್ಕಕ್ಕೆ ಸರಿದ ಇತರ ಮಹಿಳೆಯರಿಗೆ ಧನ್ಯವಾದಗಳು” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.