ಜಗತ್ತಿನಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಗಂಡಸರಿಗಿಂತ ಹೆಂಗಸರ ಜೀವಿತಾವಧಿ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಅಮೆರಿಕದ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ನಡೆಸಿದ ಅಧ್ಯಯನವೊಂದರಲ್ಲಿ ಈ ವಿಷಯ ಇನ್ನಷ್ಟು ಖಾತ್ರಿಯಾಗಿದೆ. ಅಮೆರಿಕದ ಪುರುಷರ ಸರಾಸರಿ ಆಯುಷ್ಯವು 76 ವರ್ಷಗಳಾದರೆ ಮಹಿಳೆಯರ ಸರಾಸರಿ ಆಯುಷ್ಯ 81 ವರ್ಷಗಳೆಂದು ಕಂಡುಬಂದಿದೆ.
ದಕ್ಷಿಣ ಡೆನ್ಮಾರ್ಕ್ ವಿವಿಯ ಜನಸಂಖ್ಯಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವರ್ಜೀನಿಯಾ ಜ಼ರುಲ್ಲಿ ಹೇಳುವ ಪ್ರಕಾರ, ಈ ವಿಚಾರದ ಹಿಂದೆ ಎರಡು ಮುಖ್ಯ ಕಾರಣಗಳಿವೆ.
ಲೈಂಗಿಕ ಹಾರ್ಮೋನುಗಳಲ್ಲಿನ ವ್ಯತ್ಯಾಸಗಳಂಥ ಜೈವಿಕ ಕಾರಣಗಳಿಂದಾಗಿ ಈ ವ್ಯತ್ಯಾಸ ಇದೆ ಎನ್ನುವ ಜ಼ರುಲ್ಲಿ, ಮಹಿಳೆಯರಲ್ಲಿ ಪುರುಷರಿಗಿಂತ ಟೆಸ್ಟೋಸ್ಟಿರೋನ್ ಪ್ರಮಾಣ ಹೆಚ್ಚಿದ್ದು, ಈಸ್ಟ್ರೋಜನ್ ಪ್ರಮಾಣ ಕಡಿಮೆ ಇರುವುದೂ ಇದಕ್ಕೊಂದು ಕಾರಣವಾಗಿದೆ ಎನ್ನುತ್ತಾರೆ.
ಹ್ಯಾಂಡ್ ಸ್ಯಾನಿಟೈಜರ್ ಬಳಸುವಾಗ ಇರಲಿ ಎಚ್ಚರ….!
ಹೃದ್ರೋಗ ಸೇರಿದಂತೆ ಅನೇಕ ರೋಗಗಳ ವಿರುದ್ಧ ಈಸ್ಟ್ರೋಜನ್ ಹೋರಾಡಲು ನೆರವಾಗುತ್ತದೆ ಎಂದು 2017ರಲ್ಲಿ ಬಿಡುಗಡೆಯಾಗಿರುವ ’ಬಯಾಲಜಿ ಆಫ್ ಸೆಕ್ಸ್ ಡಿಫರೆನ್ಸಸ್’ ವೈದ್ಯಕೀಯ ನಿಯತಕಾಲಿಕೆಯ ಅಧ್ಯಯನವೊಂದು ತಿಳಿಸುತ್ತದೆ.
ಇದೇ ವೇಳೆ ಟೆಸ್ಟೋಸ್ಟಿರೋನ್ ಅಧಿಕವಾಗಿದ್ದಲ್ಲಿ ಪುರುಷರಲ್ಲಿ ಪ್ರೊಸ್ಟ್ರೇಟ್ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನಂಥ ರೋಗಗಳು ಕಾಣಸಿಗುತ್ತವೆ ಎಂದು 2020ರಲ್ಲಿ ’ನೇಚರ್ ಮೆಡಿಸಿನ್’ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದ ಅಧ್ಯಯನ ವರದಿಯೊಂದು ತಿಳಿಸಿತ್ತು.
ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್
ಟೆಸ್ಟೋಸ್ಟೆರೋನ್‌ನಿಂದಾಗಿ ಜನರಲ್ಲಿ ಆಕ್ರಮಣಶೀಲ ಪ್ರವೃತ್ತಿ ಹೆಚ್ಚಾಗಿ ಕಂಡು ಬರುತ್ತದೆ ಎಂದು ಜ಼ರುಲ್ಲಿ ತಿಳಿಸಿದ್ದು, ಇದೇ ಕಾರಣದಿಂದ ಕಿರಿಯ ವಯಸ್ಸಿನಲ್ಲೇ ಸಾವು ಸಂಭವಿಸುವ ರಿಸ್ಕ್ ಸಹ ಹೆಚ್ಚಾಗಿ ಕಂಡು ಬರುತ್ತದೆ ಎಂದಿದ್ದಾರೆ.
ಇದರೊಂದಿಗೆ ಮಹಿಳೆಯರ ದೀರ್ಘಾಯುಷ್ಯಕ್ಕೆ ಸಾಮಾಜಿಕ ಕಾರಣಗಳನ್ನೂ ಕೊಟ್ಟಿರುವ ಜ಼ರುಲ್ಲಿ, ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರು ಮದ್ಯಪಾನ ಹಾಗೂ ಸಿಗರೇಟ್ ಸೇವನೆ ಕಡಿಮೆ ಮಾಡುತ್ತಿರುವುದೂ ಇದಕ್ಕೆ ಕಾರಣವಾಗಿದೆ ಎಂದಿದ್ದು, ಜೊತೆಯಲ್ಲಿ ಪುರುಷರಲ್ಲಿ ಆರೋಗ್ಯಕರ ಪಥ್ಯಕ್ಕಿಂತ ಕೊಬ್ಬಿನಂಶಭರಿತ ಆಹಾರಕ್ಕೆ ಆದ್ಯತೆ ಹೆಚ್ಚಿರುವುದೂ ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ.