ಮುಂಬೈನಲ್ಲಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿ ಕಂಡುಬಂದಿದೆ ಎಂದು ವರದಿಯೊಂದು ಹೇಳಿದೆ. ದೇಶಾದ್ಯಂತ ಕೊರೋನಾ ವೈರಸ್ ಎರಡನೇ ಅಲೆ ತೀವ್ರವಾಗಿದ್ದು, ಮುಂಬೈನಲ್ಲಿ ಪರಿಸ್ಥಿತಿ ಕೈಮೀರಿದೆ.
ಸಿರೋ ಸಮೀಕ್ಷೆಯಲ್ಲಿ ಮುಂಬೈನಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಪ್ರತಿಕಾಯ ಶಕ್ತಿಗಳಿವೆ ಎನ್ನುವುದು ಗೊತ್ತಾಗಿದೆ. ರಕ್ತ ಪರೀಕ್ಷೆ ನಡೆಸಿದಾಗ ಬರುವ ಪ್ರತಿಕಾಯ ಪಾಸಿಟಿವಿಟಿ ಆಧರಿಸಿ ಸಮೀಕ್ಷೆಯ ಫಲಿತಾಂಶವನ್ನು ನಿರ್ಧರಿಸಲಾಗಿದೆ. ಪಾಸಿಟಿವಿಟಿ ಹೆಚ್ಚಾಗಿದ್ದರೆ ಅದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಮುಂಬೈ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮಹಿಳೆಯರಲ್ಲಿ ಶೇಕಡ 37.12 ರಷ್ಟು ಪಾಸಿಟಿವಿಟಿ ಕಂಡುಬಂದಿದೆ. ಪುರುಷರಲ್ಲಿ ಶೇಕಡ 35.2 ರಷ್ಟು ಪಾಸಿಟಿವಿಟಿ ಪ್ರಮಾಣ ಕಂಡುಬಂದಿದೆ. 10,197 ರಕ್ತದ ಮಾದರಿಯನ್ನು ಪರೀಕ್ಷಿಸಿ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು ಎಂದು ಹೇಳಲಾಗಿದೆ.