ಸರ್ಕಾರಿ ಉದ್ಯೋಗಿಗಳಿಗೆ ಮೀಸಲಾತಿ ಸಂಬಂಧ ರಾಜಸ್ಥಾನ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. ಹೈಕೋರ್ಟ್ನ ಪ್ರಕಾರ ಮದುವೆಯ ಬಳಿಕ ಬೇರೆ ಯಾವುದೇ ರಾಜ್ಯಗಳಿಂದ ರಾಜಸ್ಥಾನಕ್ಕೆ ಬರುವ ಮಹಿಳೆಯರಿಗೆ ಎಸ್ಸಿ, ಎಸ್ಟಿ ಅಥವಾ ಓಬಿಸಿ ಆಧಾರದ ಮೇಲೆ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದರೆ ಉಳಿದ ಎಲ್ಲಾ ಸೌಲಭ್ಯಗಳನ್ನು ಮುಂದುವರಿಸಲಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.
ಹನುಮಾನ್ಗಢದ ನೊಹರ್ನಲ್ಲಿ ವಾಸವಿರುವ ಸುನೀತಾ ರಾಣಿ ಎಂಬ ಮಹಿಳೆಯ ವಿಚಾರಣೆಯ ಸಂದರ್ಭದಲ್ಲಿ ರಾಜಸ್ಥಾನ ಈ ಆದೇಶವನ್ನು ಪ್ರಕಟಿಸಿದೆ. ಸುನೀತಾ ಪಂಜಾಬ್ ಮೂಲದವರಾಗಿದ್ದರು. ಅವರು ರೇಗರ್ ಸಮುದಾಯಕ್ಕೆ ಸೇರಿದವರು. ರೇಗರ್ ಎಸ್ಸಿ ವರ್ಗದಲ್ಲಿ ಬರುತ್ತದೆ. ಇವರಿಗೆ ರಾಜಸ್ಥಾನದ ವರನೊಂದಿಗೆ ವಿವಾಹವಾಗಿತ್ತು.
ಎಸ್ಸಿ ಜಾತಿ ಪ್ರಮಾಣ ಪತ್ರಕ್ಕೆಂದು ಸುನೀತಾ ತಹಶೀಲ್ದಾರರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕೃತಗೊಳಿಸಲಾಗಿತ್ತು. ಇದಕ್ಕೆ ಸುನೀತಾ ರಾಜಸ್ಥಾನ ಮೂಲದವರಲ್ಲ ಎಂದು ಹೇಳಲಾಗಿತ್ತು. ಹೀಗಾಗಿ ಸುನೀತಾ ರಾಣಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಮೆಹ್ತಾ ರಾಜಸ್ಥಾನ ಹೈಕೋರ್ಟ್ನಲ್ಲಿ 2018 ಹಾಗೂ 2020ರಲ್ಲಿ ಇದೇ ರೀತಿಯ ಪ್ರಕರಣಗಳು ಮುನ್ನಲೆಗೆ ಬಂದಿದ್ದವು. ಮದುವೆಯಾದ ಬಳಿಕ ಅನ್ಯ ರಾಜ್ಯದ ಮಹಿಳೆಗೆ ರಾಜಸ್ಥಾನದಲ್ಲಿ ಮೀಸಲಾತಿ ನೀಡಲಾಗುವುದಿಲ್ಲ. ಆದರೆ ಅವರು ಜಾತಿ ಪ್ರಮಾಣ ಪತ್ರವನ್ನು ಹೊಂದಲು ಅರ್ಹರಾಗಿರುತ್ತಾರೆ. ಸರ್ಕಾರಿ ಉದ್ಯೋಗದ ಹೊರತಾಗಿ ನೀವು ವಿವಿಧ ಯೋಜನೆಗಳ ಲಾಭವನ್ನು ಪಡೆಯಬಹುದು ಎಂದು ಹೇಳಿದೆ.