ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತ್ರ ಜನರು ದೇಶ ಬಿಡ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಸಂದಣಿಯಿದೆ. ಆದ್ರೆ ಮಹಿಳೆಯರಿಗೆ ದೇಶ ಬಿಡುವುದು ಕಷ್ಟವಾಗಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂಟಿ ಮಹಿಳೆ ಹಾಗೂ ಹುಡುಗಿಯರಿಗೆ ಪ್ರವೇಶ ಸಿಗ್ತಿಲ್ಲ. ಇದ್ರಿಂದ ತಪ್ಪಿಸಿಕೊಳ್ಳಲು ಕೆಲ ಹುಡುಗಿಯರನ್ನು ಒತ್ತಾಯ ಪೂರ್ವಕವಾಗಿ ಅಲ್ಲಿರುವ ಯಾವುದೋ ವ್ಯಕ್ತಿಗೆ ಮದುವೆ ಮಾಡಲಾಗ್ತಿದೆ. ಕೆಲ ಹುಡುಗಿಯರು, ಅಪರಿಚಿತನ ಪತ್ನಿಯೆಂದು ಸುಳ್ಳು ಹೇಳಿ ವಿಮಾನ ಏರುತ್ತಿದ್ದಾರೆ.
ವಿಮಾನ ನಿಲ್ದಾಣಕ್ಕೆ ಬಂದ ಕುಟುಂಬಸ್ಥರು, ಮಗಳನ್ನು ಒತ್ತಾಯದ ಮದುವೆಗೆ ಒಪ್ಪಿಸುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಮೊದಲು ಯುಎಇಗೆ ಬಂದು ನಂತ್ರ ಅಮೆರಿಕಾಕ್ಕೆ ಹೋದ ಅನೇಕ ಮಹಿಳೆಯರು ಮದುವೆಯಾಗಿದ್ದಾರೆ ಎನ್ನಲಾಗ್ತಿದೆ. ಅಮೆರಿಕಾ ವಿದೇಶಿ ಸಚಿವಾಲಯ, ಯುಎಇಯಲ್ಲಿರುವ ತಮ್ಮ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆಯುತ್ತಿದೆ. ಒತ್ತಾಯದ ಮೇಲೆ ಮದುವೆಯಾದವರ ಹುಡುಕಾಟ ನಡೆಸುತ್ತಿದೆ.
ತಾಲಿಬಾನ್ ಆಡಳಿತ, ಮಹಿಳೆಯರ ಜೀವನವನ್ನು ನರಕ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ನರಕ ಅನುಭವಿಸುತ್ತಿದ್ದಾರೆ. ಅವರು ಯಾವುದೇ ಕೆಲಸ ಮಾಡುವಂತಿಲ್ಲ. ಶಾಲೆಗಳಿಗೂ ತೆರಳುವಂತಿಲ್ಲ.