ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. ಅದಕ್ಕೆ ಋತುಬಂಧ ಎಂದು ಕರೆಯಲಾಗುತ್ತದೆ.
ಸುಮಾರು 40 ವರ್ಷದ ನಂತ್ರ ಮಹಿಳೆಯರು ಋತುಬಂಧಕ್ಕೊಳಗಾಗ್ತಾರೆ. ಮುಟ್ಟಾಂತ್ಯದ ಈ ಸಂದರ್ಭದಲ್ಲಿ ಅನುಭವಿಸುವ ಯಾತನೆ, ಕಷ್ಟ ಮಹಿಳೆಯರಿಗೆ ಮಾತ್ರ ಗೊತ್ತು.
ಮುಟ್ಟಾಂತ್ಯದ ವೇಳೆ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದ್ರಲ್ಲಿ ತೂಕ ಏರಿಕೆಯೂ ಒಂದು. ಎಷ್ಟೇ ಕಷ್ಟಪಟ್ಟರೂ ತೂಕದ ಮೇಲೆ ನಿಯಂತ್ರಣ ಹೇರುವುದು ಕಷ್ಟ.
ನಿದ್ರಾಹೀನತೆ ಸಮಸ್ಯೆ ಕಾಡಲು ಶುರುವಾಗುತ್ತದೆ. ಪೂರ್ತಿ ರಾತ್ರಿ ನಿದ್ರೆ ಬರದೆ ಒದ್ದಾಡುವವರಿದ್ದಾರೆ.
ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಲು ಶುರುವಾಗುತ್ತದೆ. ಇದ್ರಿಂದ ಹೊಟ್ಟೆ ದೊಡ್ಡದಾಗುತ್ತದೆ.
ಸಣ್ಣ ಸಣ್ಣ ವಿಷಯಕ್ಕೂ ಕೋಪ ಬರುವುದು ಮಾಮೂಲಿ. ಆಗಾಗ್ಗೆ ಬರುವ ಸೀನು ಮಹಿಳೆಯರಲ್ಲಿ ಕಿರಿಕಿರಿಯುಂಟು ಮಾಡುತ್ತದೆ. ತುರಿಕೆ ಸಮಸ್ಯೆ ಕೂಡ ಬಹುತೇಕರನ್ನು ಕಾಡುತ್ತದೆ.
ಶರೀರ ದುರ್ಬಲವಾಗಿರುವುದರಿಂದ ಯಾವಾಗ್ಲೂ ಸುಸ್ತಿನ ಅನುಭವವಾಗುತ್ತದೆ. ಮೂತ್ರವನ್ನು ಬಹಳ ಹೊತ್ತು ನಿಯಂತ್ರಿಸಿಕೊಳ್ಳುವುದು ಕಷ್ಟ. ಹಾಗಾಗಿ ಸಾರ್ವಜನಿಕ ಶೌಚಾಲಯವಿರದ ಜಾಗಕ್ಕೆ ಮಹಿಳೆಯರು ಹೋಗಲು ಇಷ್ಟಪಡುವುದಿಲ್ಲ.
ನೆನಪಿನ ಶಕ್ತಿ ದುರ್ಬಲವಾಗುವುದರಿಂದ ಮರೆಯುವ ಸಮಸ್ಯೆ ಕೂಡ ಶುರುವಾಗುತ್ತದೆ. ಹಾಗೆ ಭಾರದ ವಸ್ತುಗಳನ್ನು ಎತ್ತುವುದು ಕಷ್ಟವಾಗುತ್ತದೆ.
ಉಗುರುಗಳು ದುರ್ಬಲವಾಗಿರುತ್ತವೆ. ಕೂದಲು ಕೂಡ ಶಕ್ತಿ ಕಳೆದುಕೊಂಡು ಉದುರಲು ಶುರುವಾಗುತ್ತದೆ.