ಮನೆ, ಮಕ್ಕಳ ಕೆಲಸದ ಜೊತೆ ಮನೆಯಿಂದ ಹೊರಗೆ ಹೋಗಿ ಉದ್ಯೋಗ ಮಾಡುವುದು ಅನೇಕ ಮಹಿಳೆಯರಿಗೆ ಸಾಧ್ಯವಿಲ್ಲ. ಉದ್ಯೋಗ ಮಾಡಲು ಆಸೆಯಿರುವ ಮಹಿಳೆಯರು ಮನೆಯಲ್ಲಿಯೇ ಕುಳಿತು ಕೆಲಸ ಮಾಡಿ ದೊಡ್ಡ ಮಟ್ಟದಲ್ಲಿ ಸಂಪಾದನೆ ಮಾಡಬಹುದು. ಅನೇಕರು ಮನೆಯಲ್ಲಿಯೇ ಕುಳಿತು ಗಳಿಸುತ್ತಿದ್ದಾರೆ.
ಮಹಿಳೆಯರಿಗೆ ಸುಲಭವಾಗಿ ಬರುವ ಮತ್ತು ಅವರ ದಿನನಿತ್ಯದ ಕೆಲಸ ಅಡುಗೆ. ಇದನ್ನೇ ಅವರು ವೃತ್ತಿಯನ್ನಾಗಿ ಮಾಡಿಕೊಳ್ಳಬಹುದು. ಅಗತ್ಯವಿರುವ ಸುತ್ತಮುತ್ತಲಿನ ಕೆಲವರಿಗೆ ಅಡುಗೆ ನೀಡಿ ಹಣ ಗಳಿಸಬಹುದು. ಇಲ್ಲವೆ ಸ್ವಿಗ್ಗಿಯಂತಹ ಕಂಪನಿ ಜೊತೆ ಕೈ ಜೋಡಿಸಿ ಪ್ರತಿ ದಿನ ಅಡುಗೆ ಮಾಡಿ ಗಳಿಸಬಹುದು. ದೊಡ್ಡ ಮಟ್ಟದಲ್ಲಿ ಸಾಧ್ಯ ಎನ್ನುವವರು ಮೆಸ್ ತೆರೆಯಬಹುದು.
ಯಾವುದೇ ದೊಡ್ಡ ಕಂಪನಿಯಾದ್ರೂ ಅದಕ್ಕೆ ಉತ್ತಮ ಆಲೋಚನೆ, ಪ್ಲಾನಿಂಗ್ ಅವಶ್ಯಕತೆಯಿರುತ್ತದೆ. ನೀವು ಇದ್ರ ಲಾಭ ಪಡೆಯಬಹುದು. ಕನ್ಸಲ್ಟೆನ್ಸಿ ಕೆಲಸ ಮಾಡಬಹುದು. ಮನೆಯಲ್ಲಿಯೇ ಕುಳಿತು ದೊಡ್ಡ ಕಂಪನಿಗಳಿಗೆ ಸಲಹೆ ನೀಡುವ ಕೆಲಸ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಬಟ್ಟೆ ವ್ಯಾಪಾರ ಕೂಡ ಮಹಿಳೆಯರ ಅಚ್ಚುಮೆಚ್ಚಿನ ವೃತ್ತಿಯಾಗಿದೆ. ಬಟ್ಟೆ ಮಾತ್ರವಲ್ಲ ಅಗತ್ಯ ವಸ್ತುಗಳನ್ನು ನೀವು ಆನ್ಲೈನ್ ಮೂಲಕ ಮಾರಾಟ ಮಾಡಬಹುದು. ಇದು ಬೇಡಿಕೆ ಕಳೆದುಕೊಳ್ಳದ ಉತ್ತಮ ಗಳಿಕೆ ವಿಧಾನ. ಕೆಲ ಕಂಪನಿಗಳು ಬಟ್ಟೆ ವ್ಯಾಪಾರಕ್ಕೆ ಮಹಿಳೆಯರಿಗೆ ನೆರವು ನೀಡುತ್ತಿವೆ.
ಯಾವುದೇ ಕಲೆ ನಿಮಗೆ ಗೊತ್ತಿದ್ದರೆ ಅದನ್ನು ನೀವು ವೃತ್ತಿಯಾಗಿಸಿಕೊಳ್ಳಬಹುದು. ಸಂಗೀತ, ಗಿಟಾರ್, ಚಿತ್ರಕಲೆ ಸೇರಿದಂತೆ ಯಾವುದೇ ಹವ್ಯಾಸದ ಕ್ಲಾಸ್ ಶುರು ಮಾಡಬಹುದು. ಎಲ್ಲವೂ ಈಗ ಆನ್ಲೈನ್ ನಲ್ಲಿ ನಡೆಯುವುದ್ರಿಂದ ನೀವು ಸ್ಥಳಕ್ಕೆ ಬಾಡಿಗೆ ನೀಡುವ ಅಗತ್ಯವೂ ಇರುವುದಿಲ್ಲ.
ಫಿಟ್ನೆಸ್ ಸೆಂಟರ್ ಕೂಡ ನೀವು ಶುರು ಮಾಡಬಹುದು. ಇದಕ್ಕೂ ಹೆಚ್ಚಿನ ಬಂಡವಾಳ ಬೇಕಿಲ್ಲ. ಯೋಗ ಕ್ಲಾಸ್, ಫಿಟ್ನೆಸ್ ಸೆಂಟರ್ ಶುರು ಮಾಡಿ ಅವ್ರ ಆರೋಗ್ಯ ವೃದ್ಧಿಸುವ ಜೊತೆಗೆ ನೀವು ಗಳಿಸಬಹುದು. ಆರೋಗ್ಯದ ಬಗ್ಗೆ ಈಗ ಜನರು ಹೆಚ್ಚಿನ ಕಾಳಜಿ ವಹಿಸುತ್ತಿರುವ ಕಾರಣ ಇದಕ್ಕೆ ಬೇಡಿಕೆ ಹೆಚ್ಚಿದೆ.
ಆನ್ಲೈನ್ ಸರ್ವೆ ಜಾಬ್ ಕೂಡ ನೀವು ಮಾಡಬಹುದು. ಇದಕ್ಕೆ ಕಚೇರಿಗೆ ಹೋಗಬೇಕಾಗಿಲ್ಲ. ಬಹುತೇಕ ಕಂಪನಿಗಳು ತಮ್ಮ ಪ್ರಾಡೆಕ್ಟ್ ಬಗ್ಗೆ ಜನರಿಗಿರುವ ಅಭಿಪ್ರಾಯ ಸಂಗ್ರಹಿಸಲು ಮುಂದಾಗ್ತಿದ್ದಾರೆ. ನೀವು ಮನೆಯಲ್ಲೇ ಕುಳಿತು ಗ್ರಾಹಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.