
ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಶನಿವಾರ ನಡೆದ ವಿಶಿಷ್ಟ ಪ್ರತಿಭಟನೆ ಅಂತರ್ ಜಾಲದಲ್ಲಿ ಇಂದು ವೈರಲ್ ಆಗಿದೆ. ಪ್ರದರ್ಶನಕಾರರನ್ನು ನೋಡಿ ಪೊಲೀಸರು ದಂಗಾಗಿದ್ದಾರೆ. ಮಹಿಳೆಯರು ಟಾಪ್‌ಲೆಸ್ ಆಗಿ ಬೀದಿಗಿಳಿದಿದ್ದರೆ, ಪುರುಷರು ಬ್ರಾ, ಬಿಕಿನಿ ಧರಿಸಿದ್ದರು.
ಲಿಂಗ ಸಮಾನತೆಗೆ ಆಗ್ರಹಿಸಿ ನೂರಾರು ಜನರು ಬರ್ಲಿನ್‌ನ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ರು. ಒಂದು ತಿಂಗಳ ಹಿಂದೆ ನಡೆದ ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಫ್ರೆಂಚ್ ಮಹಿಳೆ ಪಾರ್ಕ್ ಒಂದರಲ್ಲಿ ಟಾಪ್ ಲೆಸ್ ಆಗಿ ಸನ್ ಬಾತ್ ಮಾಡ್ತಿದ್ದಳು ಎನ್ನಲಾಗಿದೆ. ಇದನ್ನು ವಿರೋಧಿಸಿದ್ದ ಸೆಕ್ಯೂರಿಟಿ ಆಕೆಯನ್ನು ಪಾರ್ಕ್ ನಿಂದ ಹೊರಗೆ ಹಾಕಿದ್ದರು. ಇದನ್ನು ವಿರೋಧಿಸಿದ ಜನರು ದೇಹದ ಮೇಲೆ ಮೈ ಬಾಡಿ, ಮೈ ಚಾಯ್ಸ್ ಎಂಬ ಘೋಷಣೆಗಳನ್ನು ಬರೆದುಕೊಂಡಿದ್ದರು.
ಸ್ಟಾನ್ ಸ್ವಾಮಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದ ಶಿವಸೇನಾ ಸಂಸದ
ವರದಿಯ ಪ್ರಕಾರ, ಫ್ರೆಂಚ್ ಮಹಿಳೆ ಸ್ನೇಹಿತ ಮತ್ತು ಇಬ್ಬರು ಮಕ್ಕಳೊಂದಿಗೆ ಈಜು ಉದ್ಯಾನವನಕ್ಕೆ ಹೋಗಿದ್ದಳಂತೆ. ಈಜುಡುಗೆ ಧರಿಸಿದ್ದ ಮಹಿಳೆ ನಂತ್ರ ಟಾಪ್ ಲೆಸ್ ಆಗಿದ್ದಳು ಎನ್ನಲಾಗಿದೆ. ಇದನ್ನು ಗಾರ್ಡ್‌ಗಳು ವಿರೋಧಿಸಿದ್ದರು. ಬಟ್ಟೆ ಧರಿಸುವಂತೆ ಸೂಚನೆ ನೀಡಿದ್ದರು. ಆದ್ರೆ ಮಹಿಳೆ ಇದಕ್ಕೆ ಒಪ್ಪದ ಕಾರಣ ಪಾರ್ಕ್ ನಿಂದ ಹೊರಗೆ ಹಾಕಿದ್ದರು.