
ಬೆಂಗಳೂರು: ಮಹಿಳೆಯೊಬ್ಬರು ಹಳಿ ದಾಟುತ್ತಿದ್ದಾಗ ಏಕಾಏಕಿ ಗೂಡ್ಸ್ ರೈಲು ಬಂದಿದ್ದು, ಗಾಬರಿ ನಡುವೆಯೂ ಸಮಯಪ್ರಜ್ಞೆಯಿಂದ ಹಳಿ ಮೇಲೆ ಮಲಗಿ ಮಹಿಳೆ ಪ್ರಾಣ ರಕ್ಷಿಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಜಾನುಕುಂಟೆ ಬಳಿ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಹಳಿ ದಾಟುತ್ತಿದ್ದಾಗ ಗೂಡ್ಸ್ ರೈಲು ಬಂದಿದೆ. ತಕ್ಷಣ ಮಹಿಳೆ ಹಳಿಯಲ್ಲಿ ಮಲಗಿ ಜೀವ ಉಳಿಸಿಕೊಂಡಿದ್ದಾರೆ. ರೈಲು ಹೋದ ಬಳಿಕ ನಿಧಾನವಾಗಿ ಎದ್ದು ಬಂದಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.