
ಮದುವೆಯಾಗುವ ಮೊದಲು ಮನೆಯಲ್ಲಿ ಕಳೆದ ಕೊನೆಯ ರಾತ್ರಿಯ ಕುರಿತು ಸಹೋದರಿಯ ಅನಿಸಿಕೆಯನ್ನು ಅವರು ಹಂಚಿಕೊಂಡಿದ್ದಾರೆ. ನನ್ನ ಸಹೋದರಿಯ ಮದುವೆ ಮಾರನೆಯ ದಿನವಿತ್ತು. ನಮ್ಮ ಮನೆಯಲ್ಲಿ ಆಕೆ ಕಳೆದ ಕೊನೆಯ ರಾತ್ರಿ ನೆನಪಿದೆ. ಅವಳ ಮದುವೆಯ ದಿನ ಎಂದು ಎಲ್ಲರೂ ಅವಳನ್ನು ಬೇಗ ಮಲಗಿಸಿದರು. ನಾನು ದುಃಖ ಮತ್ತು ಉತ್ಸಾಹದಿಂದ ರಾತ್ರಿಯಿಡೀ ಮಲಗಲು ಸಾಧ್ಯವಾಗಲಿಲ್ಲ. ಮುಂಜಾನೆ 4 ಗಂಟೆಯ ಸುಮಾರಿಗೆ ನಾನು ತಿಂಡಿ ತೆಗೆದುಕೊಳ್ಳಲು ಅಡುಗೆ ಮನೆಗೆ ಹೋದೆ ಮತ್ತು ಅಲ್ಲಿ ಅವಳು ತಿಂಡಿ ಮಾಡುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ.
ದುಃಖದಲ್ಲಿದ್ದ ಆಕೆ ನನ್ನನ್ನು ತಬ್ಬಿಕೊಂಡಳು. ನನಗೆ ಎಲ್ಲವನ್ನೂ ಕಳೆದುಕೊಳ್ಳುವ ನೋವು ಆವರಿಸಿತು. ಸುಖ ದುಃಖ ಎರಡೂ ಆಗುವ ಗಳಿಗೆ ಇದು. ಇನ್ನು ಮುಂದೆ ನನ್ನ ಅಕ್ಕ ನನ್ನ ಜೊತೆ ಇರುವುದಿಲ್ಲ ಎಂದು ನೆನಸಿಕೊಳ್ಳಲೂ ಸಾಧ್ಯವಾಗದ ಮಾತಾಗಿತ್ತು ಎಂದಿದ್ದಾರೆ.