ಕಪ್ಪು ಬಣ್ಣದವರಿಗೆ ಬೆಳ್ಳಗಾಗುವ ಆಸೆ, ಬೆಳ್ಳಗಿರುವವರಿಗೆ ಟ್ಯಾನ್ ಆಗುವ ಆಸೆ. ತಮಗೆ ಹುಟ್ಟುತ್ತಲೆ ಸಿಕ್ಕ ಚರ್ಮದ ಬಣ್ಣ ಒಪ್ಪಿಕೊಳ್ಳದ ಜನರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತ ತಮ್ಮ ಚರ್ಮವನ್ನೆ ಹಾಳು ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬ 25ವರ್ಷದ ಮಹಿಳೆ ತನ್ನ ಬೆಳ್ಳನೆ ಚರ್ಮಕ್ಕೆ ಗೋಲ್ಡನ್ ಗ್ಲೋ ಕೊಡಲು ಹೋಗಿ, ಯಡವಟ್ಟು ಮಾಡಿಕೊಂಡಿದ್ದಾಳೆ.
ಡೆವಾನ್ ಬರ್ಕೆಟ್ ಎನ್ನುವ 25 ವರ್ಷದ ಮಹಿಳೆ ತನ್ನ ಗೆಳೆಯರೊಂದಿಗೆ ಪಿಕ್ನಿಕ್ ಗೆ ಹೋಗಲು ಸ್ವಯಂ ಆಗಿ ಮನೆಯಲ್ಲೆ ಸ್ಪಾ ಸೆಷನ್ಗೆ ತಯಾರಾಗಿದ್ದಾಳೆ. ಸಹಜವಾಗಿ ಬೆಳ್ಳನೆ ಚರ್ಮ ಹೊಂದಿರುವ ಡೆವಾನ್ ಗೆ ಗೋಲ್ಡನ್ ಗ್ಲೋ ನೀಡುವ ಟ್ಯಾನ್ ಸ್ಕಿನ್ ತುಂಬಾ ಇಷ್ಟವಂತೆ. ಹೀಗಾಗಿ ಟ್ಯಾನ್ ಕ್ರೀಮ್ ಹಚ್ಚಿಕೊಂಡಿದ್ದಾಳೆ. ಮೂಸ್ ಟೆಕ್ಸ್ಚರ್ ನಲ್ಲಿರುವ ಟ್ಯಾನ್ ಕ್ರೀಮ್ ನ ಒಂದು ಲೇಯರ್ ಹಚ್ಚಿಕೊಂಡು, ಕಾಲಕಳೆಯಲು ಯಾವುದೋ ಡಾಕ್ಯುಮೆಂಟರಿ ನೋಡುತ್ತಾ ಕುಳಿತಿದ್ದಾಳೆ. ಎರಡು ಗಂಟೆಯಾದ ಮೇಲೆ ಆಕೆಯ ಚರ್ಮ ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದೆ.
ಟ್ಯಾನ್ ಕ್ರೀಮ್ ತಂದೊಡ್ಡಿದ ಸಂಕಷ್ಣದಿಂದ ಆತಂಕಗೊಂಡ ಡೆವಾನ್ ತಕ್ಷಣ ತನ್ನ ಗೆಳೆಯರಿಗೆ ವಿಡಿಯೋ ಕರೆ ಮಾಡಿದ್ದಾಳೆ. ಆಕೆಯನ್ನ ನೋಡಿದಾಕ್ಷಣ ಆಕೆಯ ಸ್ನೇಹಿತರು, ಗ್ರೀನ್ ಶ್ರೆಖ್ ಎಂದು ಚೇಡಿಸಿದ್ದಾರೆ. ನಂತರ ಸಮಸ್ಯೆಯ ಗಂಭೀರತೆ ಅರಿತು ತಕ್ಷಣ ಸ್ನಾನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸ್ನಾನದ ನಂತರ ಹಸಿರು ಬಣ್ಣ ತೊಳೆದು ಹೋಯಿತಾದರು ಆಕೆಯ ಮುಖದಲ್ಲಿ ಹಸಿರು ಟಿಂಟ್ ಹಾಗೆಯೇ ಉಳಿದಿತ್ತು. ಇದರಿಂದ ಹೆದರಿದ ಆಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾಳೆ. ಘಟನೆಯಾದ ಸ್ವಲ್ಪ ದಿನದ ನಂತರವು ಆಕೆಯ ಮುಖದ ಮೇಲೆ ಹಸಿರು ಬಣ್ಣದ ಟಿಂಟ್ ಉಳಿದಿತ್ತು ಎಂದು ವರದಿಯಾಗಿದೆ.