ಸಾಮಾಜಿಕ ಮಾಧ್ಯಮ ಅಸಂಖ್ಯಾತ ಎಲೆಮರೆ ಕಾಯಿಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಇದೀಗ ಸಾಮಾಜಿಕ ಮಾಧ್ಯಮವು ಮತ್ತೊಮ್ಮೆ ಅಂತಹುದೇ ವೀಡಿಯೊವನ್ನು ಮುಂದಕ್ಕೆ ತಂದಿದೆ. ಈ ಬಾರಿ ವೈರಲ್ ಆಗಿರುವುದು ಹಾಡು ಯಾರದ್ದು, ಲಿಪ್ ಸಿಂಕ್ ಮಾಡಿದ್ದು ಮತ್ಯಾರೋ ಎಂಬ ಕಂಟೆಂಟ್ ಅಲ್ಲ. ಬದಲಿಗೆ ಬಾಲಿವುಡ್ನ ಕ್ಲಾಸಿಕ್ ಯುಗ ನೆನಪಿಸುವಂತಹ ವಿಡಿಯೋ ಕ್ಲಿಪ್.
ಭಾರತೀಯ ತಾಯಿಯೊಬ್ಬಳು ತನ್ನ ಮಗುವಿನ ಒತ್ತಾಯಕ್ಕೆ 1970ರ ದಶಕದ ಮೇರೆ ನೈನಾ ಸಾವನ್ ಭಾಡೋನ್ ಹಾಡನ್ನು ಹಾಡಿದ್ದು, ರೋಮ್ಯಾಂಟಿಕ್ ಹಾಡಿನ ಮಹಿಳೆಯ ಆಕರ್ಷಕ ನಿರೂಪಣೆಯು ಅಂತರ್ಜಾಲದಲ್ಲಿ ಲಕ್ಷಾಂತರ ಮಂದಿಯ ಹೃದಯ ಬೆಚ್ಚಗಾಗಿಸಿದೆ.
ಸಾಮಾನ್ಯವಾಗಿ ಹಾಡನ್ನು ಭಾವಾವೇಶದಿಂದ ಹಾಡಲು ತಮ್ಮ ಸಂರ್ಪೂಣ ಏಕಾಗ್ರತೆ ತೋರುವ ಗಾಯಕರನ್ನು ನೋಡಿಸುತ್ತೇವೆ. ಆದರೆ, ಈ ಕ್ಲಿಪ್ನಲ್ಲಿ ಚಪಾತಿ ಮಾಡುವಾಗ ಮಹಿಳೆ ಹಾಡುತ್ತಿರುವುದು ವಿಡಿಯೋದಲ್ಲಿ ಕಾಣಸಿಗುತ್ತದೆ.
ನೆಲದ ಮೇಲೆ ಕುಳಿತು ಚಪಾತಿ ತಯಾರಿಸುತ್ತಿರುವುದನ್ನು ತೋರಿಸುವ ಮೂಲಕ ವೀಡಿಯೊ ಆರಂಭವಾಗುತ್ತದೆ. ಆಕೆಯ ಮಗು ನಾನು ನಿಮ್ಮ ಧ್ವನಿ ಇಷ್ಟಪಡುತ್ತೇನೆ ಒಮ್ಮೆ ಹಾಡುವಂತೆ ಕೋರಿಕೆ ಇಡುವುದನ್ನು ಕೇಳಬಹುದು. ಆಕೆ ತನ್ನ ಅಡುಗೆಯನ್ನು ವಿರಾಮಗೊಳಿಸದೆ ಸುಶ್ರಾವ್ಯವಾಗಿ ಹಾಡಲು ಪ್ರಾರಂಭಿಸುತ್ತಾಳೆ. ಕಾಮೆಂಟ್ ವಿಭಾಗದಲ್ಲಿ ಆಕೆಯನ್ನು ನೆಟ್ಟಿಗರು ಹೊಗಳಿದ್ದಾರೆ.
ಮೇರೆ ನೈನಾ ಸಾವನ್ ಭಾಡೋನ್ ಅನ್ನು ಗಾಯಕಿ ಲತಾ ಮಂಗೇಶ್ಕರ್ 1976ರ ಮೆಹಬೂಬಾ ಚಿತ್ರಕ್ಕಾಗಿ ಹಾಡಿದ್ದರು. ಇದರಲ್ಲಿ ರಾಕೇಶ್ ಖನ್ನಾ ಮತ್ತು ಹೇಮಾ ಮಾಲಿನಿ ನಟಿಸಿದ್ದಾರೆ.