ಮದುವೆಯಾದ ಕೆಲ ದಿನಗಳಲ್ಲಿಯೇ ಮನೆಯಲ್ಲಿರುವ ಹಣ, ಆಭರಣ ದೋಚಿ ವಧು ಪರಾರಿಯಾಗುವ ಅನೇಕ ಘಟನೆ ಬೆಳಕಿಗೆ ಬಂದಿದೆ. ಆದ್ರೆ ಕರ್ನಾಟಕದಲ್ಲಿ ವಿಚಿತ್ರ ಪ್ರಕರಣ ಸುದ್ದಿಯಲ್ಲಿದೆ. ಮಹಿಳೆಯೊಬ್ಬಳು ಒಂದಲ್ಲ ಎರಡಲ್ಲ ಏಳು ಮದುವೆ ಆಗಿ ಏಳನೇಯವನಿಗೆ ಈಗ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ನ್ಯಾಯಾಧೀಶರು ಮಹಿಳೆಯ ಏಳನೇ ವಿಚ್ಛೇದನದ ಬಗ್ಗೆ ವಕೀಲರೊಂದಿಗೆ ಮಾತನಾಡುತ್ತಿದ್ದಾರೆ. ಇದು ಅವಳ ಏಳನೇ ಪತಿಯೇ ಎಂದು ನ್ಯಾಯಾಧೀಶರು ಕೇಳುತ್ತಾರೆ. ಅವರೆಲ್ಲರ ವಿರುದ್ಧ ಸೆಕ್ಷನ್ 498 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆಯೇ ಎಂದು ಅವರು ಕೇಳುತ್ತಾರೆ. ಮಹಿಳೆ ಮದುವೆಯಾದ ಆರು ತಿಂಗಳಿನಿಂದ ಒಂದು ವರ್ಷ ಒಬ್ಬ ಪತಿ ಜೊತೆ ಜೀವನ ನಡೆಸಿದ್ದಾಳೆ. ನಂತ್ರ ಸೆಕ್ಷನ್ 498A ಅಡಿಯಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ನಂತ್ರ ಎಲ್ಲರಿಂದ ಆಕೆ ಜೀವನಾಂಶ ಪಡೆಯುತ್ತಿದ್ದಾಳೆ.
ವೈರಲ್ ವಿಡಿಯೋದಲ್ಲಿ ಆಕೆ ಒಬ್ಬ ಪತಿ ಜೊತೆ ಎಷ್ಟು ವರ್ಷ ವಾಸವಾಗಿದ್ದಾಳೆ ಎಂಬುದನ್ನು ಕೇಳುವ ನ್ಯಾಯಾದೀಶರು, ಮಹಿಳೆ ಕಾನೂನನ್ನು ದುರುಪಯೋಗಪಡಿಸಿಕೊಂಡಿದ್ದಾಳೆಂದಿದ್ದಾರೆ. ಎಲ್ಲ ಮಾಜಿ ಪತಿಯ ಫೋಟೋ ಹಾಗೂ ದಾಖಲೆ ಇದ್ದು, ಮುಂದಿನ ವಿಚಾರಣೆ ವೇಳೆ ಎಲ್ಲರನ್ನೂ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನ್ಯಾಯಾಧೀಶರ ಈ ಪ್ರಕರಣದ ಸಮಗ್ರ ತನಿಖೆಯನ್ನು ಬಳಕೆದಾರರು ಶ್ಲಾಘಿಸುತ್ತಿದ್ದಾರೆ.