ಮೃತ ಪತಿಯ ಆಸ್ತಿಯ ಮೇಲೆ ಪತ್ನಿಗೆ ಇರುವ ಅಧಿಕಾರವನ್ನ ತಪ್ಪಿಸಬೇಕು ಅಂದಾದಲ್ಲಿ ಆಕೆಗೆ ಮರುಮದುವೆಯಾಗಿದೆ ಅನ್ನೋದನ್ನ ಕಾನೂನಾತ್ಮಕವಾಗಿ ಸಾಬೀತು ಪಡಿಸಬೇಕು ಎಂದು ಚತ್ತೀಸಗಢ ಹೈಕೋರ್ಟ್ ಹೇಳಿದೆ.
ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕೆ. ಅಗರ್ವಾಲ್ ನೇತೃತ್ವದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ತನ್ನ ಮೃತ ಸಹೋದರನ ಪತ್ನಿ ಮರು ಮದುವೆಯಾದ ಕಾರಣಕ್ಕೆ ಆಕೆಗೆ ಆಸ್ತಿ ಮೇಲೆ ಅಧಿಕಾರ ನೀಡಬಾರದು ಎಂದು ವ್ಯಕ್ತಿ ಸಲ್ಲಿಸಿದ ಅರ್ಜಿಯನ್ನ ತಿರಸ್ಕರಿಸುವ ಮೂಲಕ ಈ ಆದೇಶ ನೀಡಿದೆ.
ಹಿಂದೂ ವಿಧವೆಯರ ಪುನರ್ವಿವಾಹ ಕಾಯ್ದೆ 1856ರ ಸೆಕ್ಷನ್ 6ರ ಪ್ರಕಾರ, ವಿಧವೆಯು ಮರುಮದುವೆಯಾದ ಸಂದರ್ಭದಲ್ಲಿ ಅದನ್ನು ಕಾನೂನು ರೀತಿಯಲ್ಲಿಯೇ ಸಾಬೀತುಪಡಿಸುವ ಅಗತ್ಯವಿದೆ ಎಂದು ಆದೇಶ ಪ್ರತಿ ಹೇಳಿದೆ.
ಕಿಯಾ ಎಂಬವರ ಪತಿ ಘಾಸಿ ಎಂಬವರು ಮೃತರಾಗಿದ್ದರು, ಘಾಸಿ ಸಾವಿನ ಬಳಿಕ ಪಿತ್ರಾರ್ಜಿತ ಆಸ್ತಿ ಕಿಯಾಳ ಪಾಲಾಗಿತ್ತು. ಕಂದಾಯ ಇಲಾಖೆಯಲ್ಲಿ ಆಸ್ತಿ ಕಿಯಾ ಪಾಲಾದ ಬಗ್ಗೆ ದಾಖಲೆ ಇದೆ. ಆದರೆ ಸರ್ಕಾರಿ ದಾಖಲೆಗಳ ಪ್ರಕಾರ ಕಿಯಾ ಮರು ಮದುವೆಯ ಬಗ್ಗೆ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ ಹಿಂದೂ ವಿಧವೆಯರ ಪುನರ್ವಿವಾಹ ಕಾಯ್ದೆ 1856ರ ಸೆಕ್ಷನ್ 6ರ ಪ್ರಕಾರ ಈ ಅರ್ಜಿಯನ್ನ ಕೋರ್ಟ್ ವಜಾಗೊಳಿಸಿದೆ..
ಇದೀಗ ಇಡೀ BSY ಕುಟುಂಬವನ್ನೇ ಜೈಲಿಗೆ ಕಳಿಸಲಿರುವ ವಿಜಯೇಂದ್ರ: ರಮೇಶ್ ಸಿಡಿ ಕೇಸ್ ನಲ್ಲಿ ಅವರ ಪಾತ್ರವಿದೆ
ಆಸ್ತಿ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದ ಲೋಕನಾಥ್, ಕಿಯಾ ತನ್ನ ಪತಿಯ ಸಾವಿನ ಬಳಿಕ ಸಾಂಪ್ರದಾಯಿಕ ಪದ್ಧತಿಯಂತೆ ಮರು ಮದುವೆ ಆಗಿದ್ದಾಳೆ. ಹೀಗಾಗಿ ಆಕೆ ಮತ್ತು ಆಕೆಯ ಪುತ್ರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಪಾಲನ್ನ ನೀಡಬಾರದು ಎಂದು ವಾದಿಸಿದ್ದರು.