ಉತ್ತಮ ಕೈಬರಹ ಎಲ್ಲರಿಗೂ ಸಿದ್ದಿಸಿರುವುದಿಲ್ಲ. ಕೆಲವರು ಬಹಳ ಅಂದವಾಗಿ ಬರಹ ಬರೆದ್ರೆ, ಇನ್ನೂ ಕೆಲವರು ಕೆಟ್ಟದಾಗಿ ಬರೆಯುತ್ತಾರೆ. ಉತ್ತಮ ಕೈಬರಹವು ಇಡೀ ಪಠ್ಯದ ವಸ್ತುವನ್ನು ಸುಂದರಗೊಳಿಸುತ್ತದೆ ಮತ್ತು ಉತ್ತಮ ಹ್ಯಾಂಡ್‌ಶೇಕ್‌ನಂತೆಯೇ ಜನರನ್ನು ಮೆಚ್ಚಿಸುತ್ತದೆ.
ಪ್ರಸ್ತುತ ಡಿಜಿಟಲ್ ಯುಗದಲ್ಲಿ, ಅನೇಕರು ಕೈ ಬರಹವನ್ನು ಗೌರವಿಸಲು ಯೋಗ್ಯವಾದ ಕೌಶಲ್ಯವೆಂದು ನೋಡುತ್ತಾರೆ. ಏಕೆಂದರೆ, ನಮ್ಮಲ್ಲಿ ಹಲವರು ಇನ್ನು ಮುಂದೆ ಕೈಯಲ್ಲಿ ಬರೆಯಲು ಒಲವು ತೋರುವುದಿಲ್ಲ. ಆದರೆ, ಇಲ್ಲೊಬ್ಬ ಮಹಿಳೆಯ ಕೈಬರಹವು ನೆಟ್ಟಿಗರನ್ನು ಮೋಡಿ ಮಾಡಿದೆ.
ನಮ್ಮ ಜೀವನದ ಕೆಲವು ಹಂತದಲ್ಲಿ ಸ್ನೇಹಿತರು, ಸಂಬಂಧಿ ಅಥವಾ ಶಿಕ್ಷಕರ ಕೈಬರಹವನ್ನು ಬಹುತೇಕ ಎಲ್ಲರೂ ಅಸೂಯೆ ಪಟ್ಟಿರಬಹುದು. ಆದರೆ, ಯೂಟ್ಯೂಬರ್ ತನ್ನ ಅಂದವಾದ ಕೈಬರಹದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದಾಳೆ. ಕೈಬರಹದ ಪಾಠಗಳಿಂದ ಹಿಡಿದು ಖಾಲಿ ಕಾಗದದ ಮೇಲೆ ನೇರವಾಗಿ ಬರೆಯುವುದು ಹೇಗೆ? ಎಂಬ ಬಗ್ಗೆ ವಿಡಿಯೋದಲ್ಲಿ ವಿವರಿಸಲಾಗಿದೆ.
ಕಂಟೆಂಟ್ ಕ್ರಿಯೇಟರ್ ಆಗಿರುವ ಮಹಿಳೆಯ ಚಂದದ ಕೈಬರಹ ನೆಟ್ಟಿಗರನ್ನು ಮೋಡಿ ಮಾಡಿದೆ. ಈಕೆಯ ಬರಹವು, ಯಂತ್ರಗಳಿಂದ ಮಾಡಿದ ಕ್ಯಾಲಿಗ್ರಫಿ ಅಥವಾ ಬರವಣಿಗೆ ಅಪ್ಲಿಕೇಶನ್‌ಗಳಲ್ಲಿ ಬಳಸುವ ಫಾಂಟ್‌ಗಳಂತಿವೆ ಎಂದು ಹೊಗಳಿದ್ದಾರೆ. ಈ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಸಂಗ್ರಹಿಸಿವೆ.
ಅವಳ ಬರವಣಿಗೆ ಎಷ್ಟು ಚೆನ್ನಾಗಿದೆಯೆಂದರೆ ಅದು ಹೇಗೆ ಮುದ್ರಿತವಾಗಿದೆ ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಕೈಬರಹವು ದೋಷರಹಿತವಾಗಿದ್ದು, ಇದು ಕಂಪ್ಯೂಟರ್ ಫಾಂಟ್‌ನಂತೆ ಕಾಣುತ್ತದೆ. ಇದೊಂದು ಕೈಬರಹ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.